ಮೇ 3 ರಿಂದ ಆರಂಭ
ಮಡಿಕೇರಿ, ಏ. 24: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ವತಿಯಿಂದ ಮೇ 3 ರಿಂದ 5ರ ವರೆಗೆ 9ನೇ ವರ್ಷದ ರಾಜ್ಯಮಟ್ಟದ ‘ಜೈ ಜವಾನ್ ಟ್ರೋಫಿ’ “ಖುಷಿಗೊಂಜಿ ಗೊಬ್ಬು” ಕ್ರಿಕೆಟ್ ಹಾಗೂ ಥ್ರೋ ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷÀ ಬಿ.ಶಿವಪ್ಪ ಹಾಗೂ ಮೊಗೇರ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷÀ ಪಿ.ಸಿ.ರಮೇಶ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೇ 3 ರಿಂದ 5 ರವರೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ (ಮ್ಯಾನ್ಸ್ ಕೌಂಪೌಂಡ್)ದಲ್ಲಿ ಪಂದ್ಯಾವಳಿ ನಡೆಯಲಿದೆ. ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ. 20 ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ಪಡೆದ ತಂಡಕ್ಕೆ ರೂ.10 ಸಾವಿರ ಹಾಗೂ ಆಕರ್ಷಕ ಬಹುಮಾನ ನೀಡಲಾಗುವದು. ಅಲ್ಲದೆ ಸೆಮಿಫೈನಲ್ ತಲುಪಿದ ಎರಡು ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುವದು ಎಂದು ಮಾಹಿತಿ ನೀಡಿದ್ದಾರೆ.
ಪಂದ್ಯಾವಳಿಯ ಎಲ್ಲಾ ತಂಡದಲ್ಲಿ 11+1 ಆಟಗಾರರು ಕಡ್ಡಾಯ, ಎಲ್ಲಾ ಪಂದ್ಯಾಟವು 6 ಓವರ್‍ಗಳಿಗೆ ಸೀಮಿತವಾಗಿದ್ದು, ತಾ. 25 ರೊಳಗೆ ತಂಡಗಳು ಹೆಸರು ನೋಂದಾಯಿಸಿಕೊಳ್ಳಬಹುದು. ಕ್ರೀಡಾಕೂಟದಲ್ಲಿ ಗ್ರಾಮೀಣ ಕ್ರೀಡೆಗಳಾದ ಹಗ್ಗ ಜಗ್ಗಾಟ, ಕಾಳು ಹೆಕ್ಕುವದು, ಓಟ, ನಿಂಬೆ ಓಟದ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9483487528, 9964060716 ಸಂಪರ್ಕಿಸಬಹುದಾಗಿದೆ.