ನಾಪೆÇೀಕ್ಲು, ಏ. 24: ಕಕ್ಕಬ್ಬೆ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್ ವತಿಯಿಂದ ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈಲ್ಯಾಂಡರ್ಸ್ ಇನ್ವಿಟೇಶನ್ ಕಪ್ ಚಾರಿಟಿ ಟೂರ್ನಮೆಂಟ್ ಪಂದ್ಯಾಟದಲ್ಲಿ ಮಂಡೀರ, ತಂಬುಕುತ್ತಿರ, ಬ್ಲೂ ಟೀಮ್, ಓಡಿಯಂಡ, ಕಲಿಯಂಡ, ಮಂಡೆಯಂಡ, ಚೆಪ್ಪುಡಿರ ತಂಡಗಳು ಜಯಗಳಿಸಿ ಮುಂದಿನ ಸುತ್ತು ಪ್ರವೇಶಿಸಿವೆ.
ಬೆಳಿಗ್ಗೆ ನಡೆದ ಮಂಡೀರ ಮತ್ತು ಚೆನ್ನಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೀರ ತಂಡವು 3-1 ಗೋಲಿನ ಅಂತರದಿಂದ ಜಯಗಳಿಸಿತು. ಮಂಡೀರ ಮದು ಬಿದ್ದಪ್ಪ, ಪ್ರೀತಂ ಮುದ್ದಪ್ಪ, ಶರೀನ್ ತಲಾ ಒಂದೊಂದು ಗೋಲು ಗಳಿಸಿದರೆ, ಚೆನ್ನಪಂಡ ತಂಡದ ಪರ ಪ್ರಶಾಂತ್ ಭೀಮಯ್ಯ ಒಂದು ಗೋಲು ದಾಖಲಿಸಿದರು. ಕಾಳಚಂಡ ಮತ್ತು ತಂಬುಕುತ್ತಿರ ತಂಡಗಳ ನಡುವಿನ ಪಂದ್ಯದಲ್ಲಿ ತಂಬುಕುತ್ತಿರ ತಂಡವು 6-0 ಗೋಲಿನಿಂದ ಕಾಳಚಂಡ ತಂಡವನ್ನು ಮಣಿಸಿತು. ತಂಬುಕುತ್ತಿರ ಬೋಪಣ್ಣ ಮೂರು ಗೋಲು, ದೀಪು ಚಂಗಪ್ಪ ಎರಡು, ಶರಣ್ ಒಂದು ಗೋಲು ದಾಖಲಿಸಿದರು. ಬ್ಲೂ ಮತ್ತು ಆರೆಂಜ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬ್ಲೂ ತಂಡವು 1-0 ಗೋಲಿನಿಂದ ಆರೆಂಜ್ ತಂಡವನ್ನು ಸೋಲಿಸಿತು.
ಬ್ಲೂ ತಂಡದ ಪರ ಕಲಿಯಂಡ ಚಂಗಪ್ಪ ಒಂದು ಗೋಲು ದಾಖಲಿಸಿದರು. ಚಾರಿಟಿ ಹಾಕಿ ಟೂರ್ನಮೆಂಟ್‍ನಲ್ಲಿ ಮಲ್ಲಜ್ಜಿರ ಹಾಗೂ ಓಡಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಓಡಿಯಂಡ ತಂಡವು ಮಲ್ಲಜ್ಜಿರ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಓಡಿಯಂಡ ಪೃಥ್ವಿ ಎರಡು ಹಾಗೂ ಸುರೇಶ್ ತಿಮ್ಮಯ್ಯ ಒಂದು ಗೋಲು ದಾಖಲಿಸಿದರೆ, ಮಲ್ಲಜ್ಜಿರ ಚೇತನ್ ಒಂದು ಗೋಲು ದಾಖಲಿಸಿದರು. ಮಂಡೇಪಂಡ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲಿಯಂಡ ತಂಡವು ಮಂಡೇಪಂಡ ತಂಡವನ್ನು 2-1 ಗೋಲಿನಿಂದ ಅಂತರದಿಂದ ಪರಾಭವಗೊಳಿಸಿತು. ಕಲಿಯಂಡ ತಂಡದ ಪರ ದಿವಿನ್, ಕಿರಣ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಮಂಡೇಪಂಡ ತಂಡದ ಪರ ದಿಲನ್ ಒಂದು ಗೋಲು ದಾಖಲಿಸಿದರು.
ಮಂಡೆಯಂಡ ಮತ್ತು ಮೊರ್ಕೊಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮಂಡೆಯಂಡ ತಂಡವು ಮೊರ್ಕೊಂಡ ತಂಡವನ್ನು 1-0 ಗೋಲಿನ ಅಂತರದಿಂದ ಮಣಿಸಿತು. ಮಂಡೆಯಂಡ ತಂಡದ ಪರ ಸಜನ್ ಲೋಕೇಶ್ ಒಂದು ಗೋಲು ದಾಖಲಿಸಿದರು. ಅರೆಯಡ ಮತ್ತು ಚೆಪ್ಪುಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಪ್ಪುಡಿರ ತಂಡವು ಅರೆಯಡ ತಂಡವನ್ನು 4-0 ಗೋಲಿನಿಂದ ಪರಾಭವಗೊಳಿಸಿತು. ಚೆಪ್ಪುಡಿರ ಕಾರ್ಯಪ್ಪ ಮೂರು ಗೋಲು, ಚಿಣ್ಣಪ್ಪ ಒಂದು ಗೋಲು ದಾಖಲಿಸಿ ತಂಡದ ವಿಜಯಕ್ಕೆ ಕಾರಣರಾದರು.