ಸೋಮವಾರಪೇಟೆ, ಏ. 25: ತೋಳೂರುಶೆಟ್ಟಳ್ಳಿ ಸುಗ್ಗಿ ಉತ್ಸವ ತಾ. 26ರಂದು (ಇಂದು) ಜರುಗಲಿದೆ. ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವಕ್ಕೆ ಕಳೆದ ಕೆಲ ದಿನಗಳಿಂದಲೇ ಚಾಲನೆ ದೊರೆತಿದ್ದು, ಪ್ರತಿದಿನ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸ ಲಾಗುತ್ತಿದೆ. ಇಂದು ಗಂಗಾ ಪೂಜೆಯ ನಂತರ, ಸಬ್ಬಮ್ಮ ತಾಯಿಯ ತವರು ಮನೆ ಎಂದೇ ಪ್ರತೀತಿ ಇರುವ ದೊಡ್ಡತೋಳೂರು ಗ್ರಾಮಕ್ಕೆ ತೆರಳಿ ಉಡಿ ತುಂಬುವ ಕಾರ್ಯ ಶ್ರದ್ಧಾಭಕ್ತಿಯಿಂದ ನಡೆಯಿತು.
ನಂತರ ದೊಡ್ಡತೋಳೂರು ಗ್ರಾಮದಿಂದ ತೊಳೂರುಶೆಟ್ಟಳ್ಳಿಯ ಸುಗ್ಗಿ ಕಟ್ಟೆಯವರೆಗೆ ಶ್ರೀ ಸಬ್ಬಮ್ಮ ದೇವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ತಾ. 26ರಂದು (ಇಂದು) ಸುಗ್ಗಿಕಟ್ಟೆಯಲ್ಲಿ ವಿಜೃಂಭಣೆಯ ಹಗಲು ಸುಗ್ಗಿ ನಡೆಯಲಿದೆ.