ಮಡಿಕೇರಿ, ಏ. 25: ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ ಕೋಟಿ ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದರೂ, ಇದುವರೆಗೆ ಸಂಬಂಧಿಸಿದ ಯೋಜನೆ ಪರಿಪೂರ್ಣಗೊಳ್ಳದೆ ಭಾರೀ ಮೊತ್ತದ ಹಣ ಕುಡಿಯುವ ನೀರಿನ ಸಲುವಾಗಿ ವ್ಯಯಗೊಳ್ಳುತ್ತಿದೆ. ಈ ಬಗ್ಗೆ ಕಳೆದ ಐದು ವರ್ಷಗಳ ಆಳ್ವಿಕೆ ಪೂರೈಸಿರುವ ಆಡಳಿತ ಮಂಡಳಿ ಸಹಿತ ಸಂಬಂಧಿಸಿದ ಅಧಿಕಾರಿಗಳು ಕೂಡ ಇದುವರೆಗೆ ನಿಖರ ಮಾಹಿತಿ ಒದಗಿಸುತ್ತಿಲ್ಲ; ಬದಲಾಗಿ ನೀರಿನಂತೆಯೇ ಹಣ ವ್ಯಯವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.2010ರಲ್ಲಿ ಮಡಿಕೇರಿ ನಗರಕ್ಕೆ ಕುಂಡಾಮೇಸ್ತ್ರಿ ಯೋಜನೆ ಮುಖಾಂತರ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪುಗೊಂಡು, ಮೂಲ 7 ಕೋಟಿ ಬದಲಿಗೆ ಸುಮಾರು ರೂ. 30 ಕೋಟಿಯ ವೆಚ್ಚಕ್ಕೆ ಆಡಳಿತಾತ್ಮಕ ಮಂಜೂರಾತಿ ಅಧಿಕಾರಿಗಳು ಕೂಡ ಇದುವರೆಗೆ ನಿಖರ ಮಾಹಿತಿ ಒದಗಿಸುತ್ತಿಲ್ಲ; ಬದಲಾಗಿ ನೀರಿನಂತೆಯೇ ಹಣ ವ್ಯಯವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.2010ರಲ್ಲಿ ಮಡಿಕೇರಿ ನಗರಕ್ಕೆ ಕುಂಡಾಮೇಸ್ತ್ರಿ ಯೋಜನೆ ಮುಖಾಂತರ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪುಗೊಂಡು, ಮೂಲ 7 ಕೋಟಿ ಬದಲಿಗೆ ಸುಮಾರು ರೂ. 30 ಕೋಟಿಯ ವೆಚ್ಚಕ್ಕೆ ಆಡಳಿತಾತ್ಮಕ ಮಂಜೂರಾತಿ (ಮೊದಲ ಪುಟದಿಂದ) ಕೂಟುಹೊಳೆ ಮುಖಾಂತರ ನಗರದ ಸ್ಟೋನ್‍ಹಿಲ್‍ನಲ್ಲಿ ಸ್ಥಾಪಿಸಿರುವ ನೀರು ಸಂಗ್ರಹಾಗಾರಕ್ಕೆ ಪಡೆದುಕೊಂಡು ನಗರದ ಜನತೆಗೆ ಸತತವಾಗಿ ಪೂರೈಸಿಕೊಂಡು ಬಂದಿದೆ. ಅಲ್ಲದೆ ಕೂಟುಹೊಳೆ ಹಿನ್ನೀರು ಪ್ರದೇಶದಲ್ಲೂ ಹಣ ವ್ಯಯಿಸಿ ಹೂಳು ತೆಗೆಸುವ ಮೂಲಕ ಮಳೆಗಾಲದ ನೀರು ಸಂಗ್ರಹಕ್ಕೆ ಪ್ರಯತ್ನ ಮಾಡಲಾಗಿದೆ.ಮೂರು ತಿಂಗಳ ವ್ಯವಸ್ಥೆ: ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಮಾತ್ರ ಕೂಟುಹೊಳೆಗೆ ಕುಂಡಾಮೇಸ್ತ್ರಿ ನೀರಿನ ಅಗತ್ಯವಿದ್ದು, ಅನಂತರದಲ್ಲಿ ಕೊಡಗಿನ ಮಳೆಗಾಲದಲ್ಲಿ ಸಹಜವಾಗಿಯೇ ನೈಸರ್ಗಿಕ ನೀರು ಅಲ್ಲಿ ಸಂಗ್ರಹಗೊಂಡು ಮಡಿಕೇರಿಗೆ ಪೂರೈಸುತ್ತಿರುವದಾಗಿದೆ.

ಜಿಲ್ಲಾಧಿಕಾರಿ ಆದೇಶ : ಹೀಗಾಗಿ ಹಿಂದೆ ಕುಂಡಾಮೇಸ್ತ್ರಿ ಯೋಜನೆ ಬಗ್ಗೆ ಪರಿಶೀಲಿಸಿದ್ದ ಅಂದಿನ ಜಿಲ್ಲಾಧಿಕಾರಿಗಳು, ಕುಂಡಾ ಮೇಸ್ತ್ರಿಯಲ್ಲಿ ಕೇವಲ ಮೂರು ತಿಂಗಳಿಗೆ ಅಣೆಕಟ್ಟೆ ನಿರ್ಮಿಸುವದರಿಂದ, ಮಳೆಗಾಲದಲ್ಲಿ ಸಾಕಷ್ಟು ಪ್ರದೇಶ ಮುಳುಗಡೆಯೊಂದಿಗೆ, ಸಮಸ್ಯೆ ಎದುರಾಗುವ ಮುನ್ಸೂಚನೆಯೊಂದಿಗೆ ಶಾಶ್ವತ ಕಿರು ಅಣೆಕಟ್ಟೆ ಬದಲು ತಾತ್ಕಾಲಿಕ ಮರಳು ಮೂಟೆ ಇರಿಸಿ ನೀರನ್ನು ಸಂಗ್ರಹಿಸಲು ನಿರ್ದೇಶಿಸಿದ್ದರೆನ್ನಲಾಗಿದೆ. ಹಾಗಾಗಿ ಈ ಐದು ವರ್ಷಗಳಿಂದ ತಾತ್ಕಾಲಿಕ ಚೆಕ್‍ಡ್ಯಾಂ ವ್ಯವಸ್ಥೆಯಲ್ಲಿ ನೀರು ಸರಬರಾಜುಗೊಂಡಿದೆ.

ಅಲ್ಲದೆ ಮಳೆ ತೀವ್ರಗೊಂಡಾಗ ಮರಳು ಮೂಟೆಗಳು ತಾವಾಗಿ ಕೊಚ್ಚಿ ಹೋಗುತ್ತಿದ್ದು, ಅಗತ್ಯವೆನಿಸಿದಾಗ ಅಡ್ಡಲಾಗಿ ಈ ಕಟ್ಟೆ ಹಾಕುತ್ತಾ ನಗರಕ್ಕೆ ನೀರು ಪೂರೈಸಿಕೊಂಡು ಬರಲಾಗಿದೆ. ಇದನ್ನೇ ನೆಪ ಮಾಡಿಕೊಂಡಿರುವ ನಗರಸಭಾ ಆಡಳಿತ, ಕೇವಲ ಕುಂಡಾಮೇಸ್ತ್ರಿ ನೀರನ್ನು ಬಳಸಿಕೊಂಡು, ಸಂಬಂಧಿಸಿದ ಯೋಜನೆಯನ್ನು ಈವರೆಗೆ ಸುಪರ್ದಿಗೆ ಹೊಂದಿಕೊಂಡಿಲ್ಲ.

ಮಾತ್ರವಲ್ಲದೆ, ಅಲ್ಲಿನ ಯಾವದೇ ವ್ಯವಸ್ಥೆ ನೋಡಿಕೊಂಡಿಲ್ಲ; ನಿರ್ವಹಣಾ ಸಿಬ್ಬಂದಿಗೆ ವೇತನ ಸೇರಿದಂತೆ ಎಲ್ಲವನ್ನು ಕರ್ನಾಟಕ ನೀರು ಸರಬರಾಜು ಮಂಡಳಿ ವಶದಲ್ಲೇ ಬಿಟ್ಟು; ಕೇವಲ ಕುಡಿಯುವ ನೀರು ಬಳಸಿಕೊಂಡಿದೆಯಾದರೂ ದಾಖಲೆಗಳಲ್ಲಿ ಆರ್ಥಿಕವಾಗಿ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಸಲುವಾಗಿ ಖರ್ಚು ತೋರಿಸುತ್ತಾ ಬಂದಿದೆ. ಈ ಬೆಳವಣಿಗೆ ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಮಂಡಳಿ ಬಳಿ ಹಣವಿಲ್ಲ : ‘ಶಕ್ತಿ’ಗೆ ಲಭಿಸಿರುವ ಮಾಹಿತಿಯ ಪ್ರಕಾರ; ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ ಯಾವದೇ ಯೋಜನೆಯನ್ನು ಸರಕಾರ ಹಾಗೂ ತಂತ್ರಜ್ಞರ ನಿರ್ದೇಶನದಂತೆ ಅನುಷ್ಠಾನಗೊಳಿಸುವದು ಕರ್ತವ್ಯ. ಬದಲಾಗಿ ಕಾಲ ಕಾಲಕ್ಕೆ ನಿರ್ವಹಣೆ ಹಾಗೂ ವ್ಯವಸ್ಥೆ ನೋಡಿಕೊಳ್ಳುವದು ನಗರಸಭೆಯಂತಹ ಸ್ಥಳೀಯ ಸಂಸ್ಥೆಗಳ ಕರ್ತವ್ಯವಾಗಿದೆ.ಇಲ್ಲಿ ಕಳೆದ ಐದು ವರ್ಷಗಳಿಂದ ಈ ಎಲ್ಲವನ್ನು ಮಂಡಳಿಯೇ ನಿರ್ವಹಿಸುತ್ತಾ ಬಂದಿದ್ದು, ನಗರಸಭೆ ಆಡಳಿತಾತ್ಮಕವಾಗಿ ಕುಡಿಯುವ ನೀರಿನ ಯೋಜನೆಯನ್ನು ವಹಿಸಿಕೊಳ್ಳದಿರುವದು ಏಕೆ ಎಂದು ಪ್ರಶ್ನಿಸಬೇಕಿದೆ.

ಹಣ ವ್ಯರ್ಥ: ಮಾಹಿತಿ ಪ್ರಕಾರ ಕುಂಡಾಮೇಸ್ತ್ರಿ ಯೋಜನೆ ಸಂಬಂಧ ಇದುವರೆಗೆ ನಗರಸಭೆಯು ಯಾವದೇ ರೀತಿಯಲ್ಲಿ ಹಣ ವೆಚ್ಚ ಮಾಡಿಲ್ಲ. ಬದಲಾಗಿ ನೀರು ಸರಬರಾಜು ಮಂಡಳಿ ಹಾಗೂ ಸಂಬಂಧಿಸಿದ ಗುತ್ತಿಗೆ ಸಂಸ್ಥೆ ಸಕಾಲದಲ್ಲಿ ‘ಚೆಕ್‍ಡ್ಯಾಂ’ ಪೂರೈಸದಿರುವದು ದೃಢಪಟ್ಟಿದೆಯಾದರೂ ಇಲ್ಲಿ ನಗರಸಭೆ ಸಕಾಲದಲ್ಲಿ ಭೂಮಿಯನ್ನು ಮಂಡಳಿಗೆ ಹಸ್ತಾಂತರಿಸದಿರುವದು ಬಹಿರಂಗಗೊಂಡಿದೆ. ಹೀಗಾಗಿ ಯೋಜನೆಯ ಬಹುಪಾಲು ಹಣ ವ್ಯರ್ಥವಾದಂತಾಗಿದೆ.

ಅರಣ್ಯ ಇಲಾಖೆ ಆಕ್ಷೇಪ : 2015ರಲ್ಲಿ ಕುಂಡಾಮೇಸ್ತ್ರಿ ಯೋಜನೆ ಜಾರಿಗೆ ಬಂದಾಗ; ಸುಮಾರು 45 ಎಕರೆ ಮುಳುಗಡೆಯ ಸಾಧ್ಯತೆಯೊಂದಿಗೆ, ನೀರು ಸರಬರಾಜು ಮಂಡಳಿ ಪ್ರಸ್ತಾವನೆ ಸಲ್ಲಿಸಿದಾಗ ಅರಣ್ಯ ಇಲಾಖೆ ಆಕ್ಷೇಪಿಸಿದೆ. ಈ ಗೊಂದಲದಿಂದಾಗಿ ಅಂದಿನ ಜಿಲ್ಲಾಧಿಕಾರಿ ತಾತ್ಕಾಲಿಕ ತಡೆಯೊಂದಿಗೆ ಮಡಿಕೇರಿಗೆ ನೀರು ಪೂರೈಸಲು ಮಂಡಳಿಗೆ ಮೌಖಿಕ ಆದೇಶ ನೀಡಿದ್ದಾರೆಂದು ಗೊತ್ತಾಗಿದೆ. ಪರಿಣಾಮ ವರ್ಷಗಳು ಉರುಳಿದಂತೆ; ಕರ್ನಾಟಕ ನೀರು ಸರಬರಾಜು ಮಂಡಳಿ ಗುತ್ತಿಗೆದಾರರಿಗೆ ನೀಡಿರುವ ಕಾಲಮಿತಿ ಮುಗಿದು, ಕಳೆದ 5 ವರ್ಷಗಳಿಂದ ನಿರ್ವಹಣೆ ವೆಚ್ಚ, ಕಾವಲು ಸಿಬ್ಬಂದಿ ಹಾಗೂ ಇತರ ಬಾಬ್ತು ಹಣ ವ್ಯಯದಿಂದ ಅಧಿಕ ಹಣ ಪೋಲಾಗಿರುವ ಅಂಶ ಬೆಳಕಿಗೆ ಬಂದಿದೆ.

ಮತ್ತೆ ಹಸಿರು ನಿಶಾನೆ : ಇದೀಗ ಅರಣ್ಯ ಇಲಾಖೆಯಿಂದ ಭೂಸ್ವಾಧೀನದೊಂದಿಗೆ ಮುಂದುವರಿದ ಕೆಲಸಕ್ಕೆ ಅನುಮತಿ ಲಭಿಸಿದ್ದು, ಶಾಶ್ವತ ‘ಚೆಕ್‍ಡ್ಯಾಂ’ ನಿರ್ಮಾಣಕ್ಕೆ ಮಂಡಳಿ ಕಾರ್ಯೋನ್ಮುಖವಾಗುತ್ತಿದೆ; ಈ ದಿಸೆಯಲ್ಲಿ ಜಿಲ್ಲಾಧಿಕಾರಿ ಕೂಡ ಸಂಬಂಧಿಸಿದವರಿಗೆ ರೂ. 5 ಕೋಟಿ ವೆಚ್ಚದ ಕಾಮಗಾರಿಯನ್ನು ಮಳೆಗಾಲಕ್ಕೆ ಮುನ್ನ ಪೂರೈಸಲು ಆದೇಶಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆ ನಡುವೆ ಕುಂಡಾಮೇಸ್ತ್ರಿ ಯೋಜನೆಯ ಉಸ್ತುವಾರಿ ವಹಿಸಿಕೊಳ್ಳುವಲ್ಲಿ ನಗರಸಭೆ ಹಾಗೂ ನಗರ ನೀರು ಸರಬರಾಜು ಮಂಡಳಿಯ ನಡುವೆ ಮುಸುಕಿನ ಜಟಾಪಟಿ ನಡೆಯುತ್ತಿದೆ; ಪರಿಣಾಮ ಮಡಿಕೇರಿಗೆ ಕುಡಿಯುವ ನೀರು ಪೂರೈಕೆ ಸಂಬಂಧ ಅನಾವಶ್ಯಕ ಹಣದ ದುಂದುವೆಚ್ಚ ಹಾಗೂ ಅಪೂರ್ಣಗೊಂಡಿರುವ ಶಾಶ್ವತ ಯೋಜನೆಯ ಪರಿಣಾಮ ರೂ. 7 ಕೋಟಿಯಿಂದ ಆರಂಭಗೊಂಡ ಕುಂಡಾಮೇಸ್ತ್ರಿ ಯೋಜನೆ ಇದೀಗ ರೂ. 30 ರಿಂದ 40 ಕೋಟಿ ವೆಚ್ಚವಾದರೂ ಗೊಂದಲದಲ್ಲೇ ಸಾಗುವಂತಾಗಿದೆ.