ಮಡಿಕೇರಿ, ಏ. 25: ಪೆÇನ್ನಂಪೇಟೆ ಗೋಲ್ಡನ್ ಜೆಸಿಐ ವತಿಯಿಂದ ಮೇ 5 ರಂದು ರಾಷ್ಟ್ರ ಮಟ್ಟದ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಮುಕ್ತ ಟ್ರ್ಯಾಕ್ ರ್ಯಾಲಿ ಹನ್ನೊಂದನೇ ವರ್ಷದ ‘ಜೇಸಿ ಆಟೋ ಕ್ರಾಸ್-2019’ ಬೇಗೂರು ಕೊಲ್ಲಿಯಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಪೆÇನ್ನಂಪೇಟೆ ಗೋಲ್ಡನ್ ಜೆಸಿಐ ಅಧ್ಯಕ್ಷರಾದ ಕಾವ್ಯ ಸಂಜು ಹಾಗೂ ಪ್ರಮುಖರು ಆಟೋ ಕ್ರಾಸ್ ಬಗ್ಗೆ ಮಾಹಿತಿ ನೀಡಿದರು. ನಿಗದಿತ ದಿನಾಂಕದಂದು ಬೆಳಿಗ್ಗೆ 9 ಗಂಟೆಗೆ ಆಟೋ ಕ್ರಾಸ್‍ಗೆ ಚಾಲನೆ ದೊರಕಲಿದ್ದು, ಈ ಬಾರಿ ರಾಷ್ಟ್ರೀಯ ಮಟ್ಟದ ಖ್ಯಾತ ರ್ಯಾಲಿ ಪಟುಗಳಾದ ಲೆನ್ ಅಯ್ಯಪ್ಪ, ಚೇತನ್ ಮೊದಲಾದವರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಪೊನ್ನಂಪೇಟೆ-ಹುದಿಕೇರಿ ಮುಖ್ಯ ರಸ್ತೆಯ ಬಳಿಯ ಬೇಗೂರು ಕೊಲ್ಲಿಯಲ್ಲಿ ತೀತಿರ, ಚಕ್ಕೇರ, ಐಪÀÅಮಾಡ, ಇಟ್ಟೀರ ಮತ್ತು ಚೇಂದಿರ ಕುಟುಂಬಸ್ಥರಿಗೆ ಸೇರಿದ ಗದ್ದೆ ಬಯಲಿನಲ್ಲಿ ಆಟೋಕ್ರಾಸ್ ಆಯೋಜನೆಗೆ ಪೂರಕವಾಗಿ 1.25 ಕಿ.ಮೀ. ಉದ್ದದ ರಾಷ್ಟ್ರೀಯ ಗುಣಮಟ್ಟದ ಟ್ರ್ಯಾಕ್‍ನ್ನು ಸಜ್ಜುಗೊಳಿಸಲಾಗುತ್ತಿದೆ.

ಸ್ಪರ್ಧೆಯ ವಿಭಾಗಗಳು

ಆಟೋಕ್ರಾಸ್ ದ್ವಿಚಕ್ರ ಮತ್ತು ನಾಲ್ಕು ಚಕ್ರ ಎಂಬ ಎರಡು ಗುಂಪುಗಳಲ್ಲಿ ನಡೆಯಲಿದೆ. ದ್ವಿಚಕ್ರ ಗುಂಪಿನಲ್ಲಿ ಆರು ಮತ್ತು ನಾಲ್ಕು ಚಕ್ರ ಗುಂಪಿನ ಐದು ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.

ದ್ವಿಚಕ್ರ ವಿಭಾಗದಲ್ಲಿ ಕೂರ್ಗ್ ಲೋಕಲ್ ಓಪನ್, ಟೂ ಸ್ಟ್ರೋಕ್ ಓಪನ್, ಫೆÇೀರ್ ಸ್ಟ್ರೋಕ್ ಓಪನ್, ಇಂಡಿಯನ್ ಓಪನ್, ಎಕ್ಸ್ ಪರ್ಟ್ ಕ್ಲಾಸ್, ನೋವಿಸ್ ಕ್ಲಾಸ್ ಹಾಗೂ ನಾಲ್ಕು ಚಕ್ರ ವಿಭಾಗದಲ್ಲಿ ಕೂರ್ಗ್ ಲೋಕಲ್ ಓಪನ್, 800 ಸಿಸಿ ಕ್ಲಾಸ್, 1001ಸಿಸಿ ಯಿಂದ 1400 ಸಿಸಿ ವರೆಗಿನ ಕ್ಲಾಸ್, 1401 ಸಿಸಿ ಯಿಂದ 1600 ಸಿಸಿ ವರೆಗಿನ ಕ್ಲಾಸ್ ಹಾಗೂ ಇಂಡಿಯನ್ ಓಪನ್ ಕ್ಲಾಸ್, ಲೇಡಿಸ್ ಕ್ಲಾಸ್, ಎಸ್‍ಯುವಿ ಓಪನ್ ಎಂದು ವಿಂಗಡಿಸಲಾಗಿದೆ.

ಎಲ್ಲಾ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನಗಳನ್ನು ಗಳಿಸುವ ಸ್ಪ್ಪರ್ಧಿಗಳಿಗೆ ನಗದು ಹಾಗೂ ಟ್ರೋಫಿಯನ್ನುü ನೀಡಲಾಗುತ್ತದೆ. ಇದರೊಂದಿಗೆ ರ್ಯಾಲಿಯಲ್ಲಿ ಗಮನ ಸೆಳೆಯುವ ‘ಅತೀ ವೇಗದ ಚಾಲಕ’ ಮತ್ತು ‘ಅತೀ ವೇಗದ ಸವಾರ’ ಎಂಬ ಪ್ರತ್ಯೇಕ ಟ್ರೋಫಿಯನ್ನು ನೀಡಲಾಗುವದೆಂದು ತಿಳಿಸಿದರು.

ಪ್ರಸಕ್ತ ಸಾಲಿನ ಆಟೋ ಕ್ರಾಸ್‍ನ ದ್ವಿಚಕ್ರ ವಿಭಾಗದಲ್ಲಿ 100ಕ್ಕೂ ಹೆಚ್ಚು ಹಾಗೂ ನಾಲ್ಕು ಚಕ್ರ ವಿಭಾಗದಲ್ಲಿ 60ಕ್ಕೂ ಹೆಚ್ಚು ಸ್ಪರ್ಧಿಗಳನ್ನು ನಿರೀಕ್ಷಿಸಲಾಗಿದೆ.

ಅಂದಾಜು 5 ಲಕ್ಷ ವೆಚ್ಚದಲ್ಲಿ ಆಟೋ ಕ್ರಾಸ್‍ನ್ನು ಆಯೋಜಿಸ ಲಾಗುತ್ತಿದೆ ಎಂದರು. ಸ್ಪರ್ಧಾಕಾಂಕ್ಷಿಗಳಿಗೆ ಸ್ಥಳದಲ್ಲೆ ಹೆಸರು ನೋಂದಣಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9480085060, 9480426149, ಸಂಪರ್ಕಿಸ ಬಹುದಾಗಿದೆ.

ಗೋಷ್ಠಿಯಲ್ಲಿ ಸಂಸ್ಥೆಯ ಮಾಜಿ ಉಪಾಧ್ಯಕ್ಷರಾದ ಕೊಟ್ಟಂಗಡ ರಾಜಾ ಸುಬ್ಬಯ್ಯ, ಮಂಡಂಗಡ ಅಶೋಕ ಮಾಚಯ್ಯ ಹಾಗೂ ಮಾಜಿ ಕಾರ್ಯದರ್ಶಿ ಕೊಣಿಯಂಡ ಸಂಜು ಸೋಮಯ್ಯ ಉಪಸ್ಥಿತರಿದ್ದರು.