ಸುಂಟಿಕೊಪ್ಪ, ಏ. 27: ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಯ ಅತ್ತೂರು ನಲ್ಲೂರು ಗ್ರಾಮದ ರಾಣಿ ಅವರ ತೋಟ ಮತ್ತು ಮನೆಗೆ ಕಾಡಾನೆಗಳ ಹಾವಳಿಯಿಂದ ಅಪಾರ ಬೆಳೆ ನಷ್ಟವಾಗಿದೆ.

ಹಲವು ದಿನಗಳಿಂದ ರಾತ್ರಿ ವೇಳೆ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಅಲೆದಾಡುತ್ತಿದ್ದು, ಮನೆ ತಡೆಗೋಡೆ ಅಡಿಕೆ ಗಿಡ ಕಾಫಿ, ಕರಿಮೆಣಸು ಬಾಳೆ ಇತರ ಬೆಳೆಗಳನ್ನು ದ್ವಂಸಗೊಳಿಸಿ ಭಾರಿ ಪ್ರಮಾಣದಲ್ಲಿ ತೋಟದ ಮಾಲೀಕರಿಗೆ ನಷ್ಟಪಡಿಸಿ ಅಂದಾಜು ಸುಮಾರು 80 ಸಾವಿರ ನಷ್ಟವಾಗಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಮನೆ ಸಮೀಪ ರಾತ್ರಿ ವೇಳೆ ಆಗಮಿಸಿದ ಕಾಡಾನೆಗಳು ಮನೆಯ ತಡೆಗೋಡೆಯನ್ನು ಕೆಡವಿ ತೋಟದಲ್ಲಿದ್ದ ಫಸಲುಗಳನ್ನು ನಾಶ ಪಡಿಸಿವೆ ಈÀ ಭಾಗದ ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿವೆ. ಇದರಿಂದ ತೋಟ ಕೆಲಸಕ್ಕೆ ಕಾರ್ಮಿಕರು ಬರುತ್ತಿಲ್ಲ್ಲ ರಾತ್ರಿ ವೇಳೆ ಮನೆಯಿಂದ ಹೊರ ಬರುವದಕ್ಕೂ ಭಯ ಪಡುತ್ತಿದ್ದಾರೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.