ಸುಂಟಿಕೊಪ್ಪ, ಏ. 25: ಇಲ್ಲಿಗೆ ಸಮೀಪದ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಎಮ್ಮೆಗುಂಡಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ಜನ ಭಯಭೀತರಾಗಿದ್ದಾರೆ. ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಆನೆ ಹಾವಳಿಯಿಂದ ಅಪಾರ ಬೆಳೆ ನಷ್ಟವಾಗಿದೆ.

ಹಲವು ದಿನಗಳಿಂದ ರಾತ್ರಿ ವೇಳೆ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಅಲೆದಾಡುತ್ತಿದ್ದು, ಕಾಫಿ, ಕರಿಮೆಣಸು ಬಾಳೆ ಇತರ ಬೆಳೆಗಳನ್ನು ದ್ವಂಸಗೊಳಿಸಿ ನಷ್ಟಪಡಿಸಿವೆ.

ಎಮ್ಮೆಗುಂಡಿ ಬಿ.ಕೆ. ವಿಶ್ವನಾಥ ರೈ ಮನೆ ಸಮೀಪ ರಾತ್ರಿ ವೇಳೆ ಕಾಡಾನೆ ಶಾಂತಗೇರಿ ತೋಟದ ಮೂಲಕ ಆಗಮಿಸಿ ಕಾಡಾನೆ ಮನೆ ಸಮೀಪದಲ್ಲ್ಲಿದ್ದ ಬೈನೆ ಗಿಡಗಳನ್ನು ದ್ವಂಸಗೊಳಿಸಿದ್ದು ಅಲ್ಲೇ ಇದ್ದ ಹಲಸಿನ ಮರದ ಕಾಯಿಗಳನ್ನು ಕೆಡವಿ ರಾತ್ರಿ ವೇಳೆ ಅಲ್ಲೇ ತಂಗಿದ್ದು ಬೆಳಗಿನ ಜಾವ ಅಲ್ಲಿಂದ ಬೇರೆಡೆಗೆ ತೆರಳಿದೆ ಈ ಭಾಗದ ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿದೆ. ಸಾರ್ವಜನಿಕರು ಮನೆಯಿಂದ ಹೊರ ಬರುವದಕ್ಕೂ ಭಯ ಪಡುತ್ತಿದ್ದಾರೆ. ಇಲಾಖೆಯಿಂದ ಕಾಡಾನೆಗಳನ್ನು ಅರಣ್ಯಗಳಿಗೆ ಓಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ