ಮಡಿಕೇರಿ, ಏ. 28: ಕನ್ನಡದ ಕಥೆಗಾರ ಬಸವರಾಜ ಕಟ್ಟಿಮನಿಯವರ ಜನ್ಮ ಶತಮಾನೋತ್ಸವ ವರ್ಷದ ಸಂದರ್ಭದಲ್ಲಿ (1919-2019) “ಬಸವರಾಜ ಕಟ್ಟಿಮನಿಯವರ ಸಣ್ಣ ಕಥೆಗಳನ್ನು ಕುರಿತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ” ಏರ್ಪಡಿಸಲು ಉದ್ದೇಶಿಸಲಾಗಿದೆ.

ಈ ಪ್ರಬಂಧ ಸ್ಪರ್ಧೆಯಲ್ಲಿ ಮೊದಲ, ಎರಡನೆಯ ಹಾಗೂ ಮೂರನೆಯ ಸ್ಥಾನ ಪಡೆಯುವ ವಿಮರ್ಶಾತ್ಮಕ ಪ್ರಬಂಧಗಳಿಗೆ ಪ್ರತಿಷ್ಠಾನವು ಕ್ರಮವಾಗಿ, ರೂ. 10 ಸಾವಿರ, ರೂ. 7 ಸಾವಿರ ಹಾಗೂ ರೂ. 5 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಕೊಡಲಾಗುವದು.

ಲೇಖಕರು ಜೂನ್ 30 ರೊಳಗೆ ತಮ್ಮ ವಿಮರ್ಶಾತ್ಮಕ ಪ್ರಬಂಧಗಳನ್ನು “ಅಧ್ಯಕ್ಷರು, ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಕುಮಾರ ಗಂಧರ್ವ ರಂಗಮಂದಿರ, ಬೆಳಗಾವಿ-590016” ಈ ವಿಳಾಸಕ್ಕೆ ನೋಂದಾಯಿತ ಅಂಚೆಯ ಮೂಲಕ ಕಳಿಸಬೇಕು. ನಂತರ ಬಂದ ಪ್ರಬಂಧಗಳನ್ನು ಸ್ವೀಕರಿಸಲಾಗುವದಿಲ್ಲ. ಹೆಚ್ಚಿನ ವಿವರಗಳಿಗೆ 0831-2474648 ದೂರವಾಣಿಯನ್ನು ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.