ಭಾಗಮಂಡಲ, ಏ. 28: ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾನುವಾರ ಕಟ್ಟೆಮನೆ, ಪೇರಿಯನ ಕೆದಂಬಾಡಿ ಮತ್ತು ಪೈಕೆರ ತಂಡಗಳು ಮುಂದಿನ ಹಂತ ಪ್ರವೇಶಿಸಿವೆ.
ಕುಯ್ಯಮುಡಿ ತಂಡವು ಪೊನ್ನೇಟಿ ತಂಡದ ವಿರುದ್ದ ಗೆಲುವು ಸಾಧಿಸಿತು. ಪೊನ್ನೇಟಿ ತಂಡವು ಎಲ್ಲಾ ವಿಕೆಟ್ ಕಳೆದುಕೊಂಡು 27 ರನ್ ಗಳಿಸಿತು. ಕುಯ್ಯಮುಡಿ ತಂಡವು 42 ರನ್ ಗಳಿಸಿ ಗೆಲುವು ಸಾಧಿಸಿತು. ಎಡಿಕೇರಿ ಮತ್ತು ಕೆದಂಬಾಡಿ (ಎ) ತಂಡಗಳ ನಡುವಿನ ಪಂದ್ಯದಲ್ಲಿ ಕೆದಂಬಾಡಿ (ಎ) ತಂಡವು 73 ರನ್ಗಳಿಸಿದರೆ ಎಡಿಕೇರಿ ತಂಡವು 48 ರನ್ ಗಳಿಸಿ 27 ರನ್ಗಳ ಸೋಲನ್ನು ಅನುಭವಿಸಿತು. ಪೈಕೇರ ಮತ್ತು ಕಾಂಗೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಂಗೀರ ತಂಡ 58 ರನ್ ಗಳಿಸಿತು.ಪೈಕೇರ ತಂಡ 7 ವಿಕೆಟ್ನಷ್ಟಕ್ಕೆ 59 ರನ್ ಗಳಿಸಿ ಗೆಲುವು ಸಾಧಿಸಿತು.
ಕೆದಂಬಾಡಿ ಎ ಮತ್ತು ಕುಯ್ಯಮುಡಿ ತಂಡಗಳ ನಡುವಿನ ಪಂದ್ಯದಲ್ಲಿ ಕುಯ್ಯಮುಡಿ ತಂಡ 47 ರನ್ ಗಳಿಸಿತು. ಕೆದಂಬಾಡಿ (ಎ) ತಂಡವು 4 ವಿಕೆಟ್ ಕಳೆದುಕೊಂಡು ಗುರಿಮುಟ್ಟಿತು. ಕಾಂಗೀರ ಮತ್ತು ಪೇರಿಯನ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಗೀರ ತಂಡ 38 ರನ್ ಗಳಿಸಿತು. ಪೇರಿಯನ ತಂಡ ಒಂದು ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿ ಗುರಿ ಸಾಧಿಸಿತು. ಕಟ್ಟೆಮನೆ ತಂಡವು ಕರ್ಣಯ್ಯನ ತಂಡದ ವಿರುದ್ದ 72 ರನ್ ಗಳಿಸಿತು. ಕರ್ಣಯ್ಯನ ತಂಡವು 25 ರನ್ ಗಳಿಸಿ 39 ರನ್ಗಳ ಸೋಲನ್ನು ಅನುಭವಿಸಿತು. ಕೆದಂಬಾಡಿ ಮತ್ತು ಕುಡೆಕಲ್ ತಂಡಗಳ ನಡುವೆ ಇಂದು ನಡೆಯಬೇಕಿದ್ದ ಪಂದ್ಯವು ಸೋಮವಾರ ಬೆಳಿಗ್ಗೆ 8.30ಕ್ಕೆ ನಡೆಯಲಿದೆ ಎಂದು ಕ್ಲಬ್ನ ಅಧ್ಯಕ್ಷರು ತಿಳಿಸಿದ್ದಾರೆ.