ಮಡಿಕೇರಿ, ಏ. 28: ಯಾವದೇ ವಿಚಾರ, ವಿಷಯವನ್ನು ಆಸಕ್ತಿಯಿಂದ ನಿರಂತರವಾಗಿ ಕಲಿಯಬೇಕೆಂದು ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್‍ನ ತರಬೇತುದಾರ ಅಶೋಕ್ ಅಯ್ಯಪ್ಪ ಹೇಳಿದರು. ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ. ಶಂಕರ್ ಸ್ಮರಣಾರ್ಥ ನಡೆಯುತ್ತಿರುವ 25ನೇ ವರ್ಷದ ಬೇಸಿಗೆ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ತಿಳಿಸಿದರು. ಪ್ರಾಣಾಯಾಮ, ವ್ಯಾಯಾಮ ಮಾಡುವದರಿಂದ ಆಗುವ ಅನುಕೂಲತೆಗಳು, ಉಪಯೋಗಗಳ ಬಗ್ಗೆ ತಿಳಿಹೇಳಿದರು. ಶಿಬಿರದಲ್ಲಿ ಕಲಿತು ನಂತರ ಮರೆತು ಬಿಡದೆ ನಿರಂತರವಾಗಿ ಅಭ್ಯಸಿಸುತ್ತಿರ ಬೇಕೆಂದು ಹೇಳಿದರು. ಇದೇ ಸಂದರ್ಭ ಶಿಬಿರದಲ್ಲಿ ಕಲಿಯುತ್ತಿರುವ ಶಿಬಿರಾರ್ಥಿಗಳನ್ನು ಮೂರು ತಂಡಗಳಾಗಿ ವಿಂಗಡಿಸಿ ಹಾಕಿ ಪಂದ್ಯಾವಳಿ ನಡೆಸಲಾಯಿತು. ವಾಂಡರರ್ಸ್ ಕ್ಲಬ್‍ನ ತರಬೇತು ದಾರರಾದ ವೆಂಕಟೇಶ್, ಲಕ್ಷಣ್‍ಸಿಂಗ್, ಬಿ.ಬಿ. ಆನಂದ ಇತರರಿದ್ದರು.