ಸಿದ್ದಾಪುರ, ಏ. 28: ಕರಡಿಗೋಡುವಿನ ದಿವಂಗತ ಕುಕ್ಕನೂರು ಬಾಲಕೃಷ್ಣ ಹಾಗೂ ಚೇತನ್ ಸ್ಮರಣಾರ್ಥ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಆವೃತ್ತಿಯ ಕೊಡಗು ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯಲ್ಲಿ ನಾಲ್ಕು ತಂಡ ಮುನ್ನಡೆ ಸಾಧಿಸಿವೆ. ಗ್ರೂಪ್ ಎ ವಿಬಾಗದಲ್ಲಿ ಒಟ್ಟು 7 ತಂಡ ಸ್ಪರ್ಧೆಯಲ್ಲಿದೆ.
ಎಸ್.ಆರ್.ಎಸ್ ಮೂರ್ನಾಡು ಹಾಗೂ ತ್ಯಾಗ್ ಬಾಯ್ಸ್ ಮಡಿಕೇರಿ ನಡುವಿನ ಪಂದ್ಯದಲ್ಲಿ ತ್ಯಾಗ್ ಬಾಯ್ಸ್ ತಂಡ ನಿಗದಿತ 8 ಓವರ್‍ಗಳಲ್ಲಿ 70 ರನ್‍ಗಳನ್ನು ಗಳಿಸಿತು. ಎಸ್.ಆರ್.ಎಸ್ ಮೂರ್ನಾಡು ತಂಡ 51 ರನ್ ಗಳಿಸಿ ಸೋಲನುಭವಿಸಿತು.
ಟೀಮ್ ಕೂಲ್ ಹಾಗೂ ತಾಜ್ ತ್ಯಾಗತ್ತೂರು ತಂಡಗಳ ನಡುವಿನ ಪಂದ್ಯಾಟದಲ್ಲಿ ಟೀಮ್‍ಕೂಲ್ ತಂಡ 36 ರನ್ ಗಳಿಸಿತು. ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ರಾಂಬೋ ಕ್ರಿಕೆಟರ್ಸ್ ನೆಲ್ಯಹುದಿಕೇರಿ ಹಾಗೂ ರಾಯಲ್ ಕುಕ್ಕುನೂರು ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ನಿಗದಿತ 8 ಓವರ್‍ಗಳಲ್ಲಿ ರಾಯಲ್ ಕುಕ್ಕುನೂರು ತಂಡ 7 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತು. ರಾಂಬೋ ತಂಡ ನಾಯಕ ರಿಯಾಜ್ ಅವರ 30 ರನ್‍ಗಳ ಸಹಾಯದಿಂದ 5.2 ಓವರ್‍ನಲ್ಲಿ ಗುರಿ ತಲಪಿತು. ಫಯರ್ ಟೈಗರ್ಸ್ ಹಾಗೂ ತ್ಯಾಗ್ ಬಾಯ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಫಯರ್ ಟೈಗರ್ಸ್ ತಂಡ 8 ಓವರ್‍ನಲ್ಲಿ 5 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿತು. ತ್ಯಾಗ್ ಬಾಯ್ಸ್ ಪರ 6.5 ಓವರ್‍ಗೆ ಗುರಿ ಮುಟ್ಟಿತು.
ಟೀಮ್ ಕೂಲ್ ಹಾಗೂ ಎಸ್.ಆರ್.ಎಸ್ ಮೂರ್ನಾಡು ತಂಡಗಳ ನಡುವಿನ ಪಂದ್ಯಾಟದಲ್ಲಿ ಟೀಮ್ ಕೂಲ್ ತಂಡ ಕ್ಷೇತ್ರರಕ್ಷಣೆಯನ್ನು ಆಯ್ಕೆ ಮಾಡಿಕೊಂಡಿತ್ತು. ಎಸ್.ಆರ್.ಎಸ್ ತಂಡ ನಿಗದಿತ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 55 ರನ್ ಬಾರಿಸಿತು. ಕೊನೆಯ ಓವರ್‍ವರೆಗೂ ಕುತೂಹಲಕಾರಿಯಾಗಿದ್ದ ಪಂದ್ಯಾಟ ಅಂತಿಮವಾಗಿ ಎಸ್.ಆರ್.ಎಸ್ ತಂಡದ ಪರವಾಯಿತು.
ರಾಂಬೋ ಕ್ರಿಕೆÀಟರ್ಸ್ ನೆಲ್ಯಹುದಿಕೇರಿ ಹಾಗೂ ತಾಜ್ ತ್ಯಾಗತ್ತೂರು ನಡುವಿನ ಪಂದ್ಯಾಟದಲ್ಲಿ ರಾಂಬೋ ತಂಡ ಟಾಸ್‍ಗೆದ್ದು, ಬೌಲಿಂಗ್ ಆಯ್ಕೆಮಾಡಿಕೊಂಡಿತು. ತಾಜ್ ತ್ಯಾಗತ್ತೂರು ನಿಗದಿತ 6 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 43 ರನ್ ಗಳಿಸಿತ್ತು. ಗೆಲುವಿಗಾಗಿ ಮೈದಾನಕ್ಕಿಳಿದ ರಾಂಬೋ ತಂಡ 4 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಫಯರ್ ಟೈಗರ್ಸ್ ಹಾಗೂ ರಾಯಲ್ ಕುಕ್ಕುನೂರು ನಡುವಿನ ಪಂದ್ಯಾಟದಲ್ಲಿ ರಾಯಲ್ ಕುಕ್ಕುನೂರು 6 ಓವರ್‍ಗಳಲ್ಲಿ 52 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಫಯರ್ ಟೈಗರ್ ತಂಡ 6 ಓವರ್ ಮುಕ್ತಾಯಕ್ಕೆ 7 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಲಷ್ಟೆ ಸಾಧ್ಯವಾಯಿತು. ತ್ಯಾಗ್ ಬಾಯ್ಸ್ ಹಾಗೂ ರಾಂಬೋ ಕ್ರಿಕೆಟರ್ಸ್ ನಡುವಿನ ಪಂದ್ಯಾಟದಲ್ಲಿ ತ್ಯಾಗ್ ಬಾಯ್ಸ್ ನಿಗದಿತ 6 ಓವರ್‍ನಲ್ಲಿ 20 ರನ್ ಗಳಿಸಿತ್ತು. ಸುಲಭ ಗುರಿ ಬೆನ್ನಟ್ಟಿದ ರಾಂಬೋ ಕ್ರಿಕೆಟರ್ಸ್ 2.2 ಓವರ್‍ನಲ್ಲಿ ಗೆಲುವು ಸಾಧಿಸಿತು.
ತಾಜ್ ತ್ಯಾಗತ್ತೂರು ಹಾಗೂ ಎಸ್.ಆರ್.ಎಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಎಸ್.ಆರ್.ಎಸ್ ತಂಡ 6 ಓವರ್‍ನಲ್ಲಿ 5 ವಿಕೆಟ್ ನಷ್ಟಕ್ಕೆ 52 ಗಳಿಸಿತ್ತು. ಜಯಕ್ಕಾಗಿ ಹೋರಾಟ ನಡೆಸಿದ ತಾಜ್ ತ್ಯಾಗತ್ತೂರು ತಂಡ 6 ಓವರ್‍ನಲ್ಲ್ಲಿ 7 ವಿಕೆಟ್ ಕಳೆದುಕೊಂಡು 32 ರನ್ ಗಳಿಸಲಷ್ಟೆ ಶಕ್ತವಾಯಿತು. ಟೀಮ್ ಕೂಲ್ ಹಾಗೂ ರಾಯಲ್ ಕುಕ್ಕುನೂರು ತಂಡಗಳ ನಡುವಿನ ಪಂದ್ಯಾಟದಲ್ಲಿ ರಾಯಲ್ ಕುಕ್ಕುನೂರು 81 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಟೀಮ್ ಕೂಲ್ ತಂಡ ನಿಗದಿತ ಓವರ್‍ನಲ್ಲಿ 74 ರನ್ ಗಳಿಸಿ ಸೋಲನುಭವಿಸಿತ್ತು.
ಫಯರ್ ಟೈಗರ್ಸ್ ಹಾಗೂ ತಾಜ್ ತ್ಯಾಗತ್ತೂರು ನಡುವಿನ ಪಂದ್ಯದಲ್ಲಿ ಫೈರ್‍ಟೈಗರ್ಸ್ ನಿಗದಿತ 6 ಓವರ್‍ನಲ್ಲಿ 46 ರನ್ ಬಾರಿಸಿತು. 47 ರನ್‍ಗಳ ಗುರಿಯೊಂದಿಗೆ ಕಣಕ್ಕಿಳಿದ ತಾಜ್ ತ್ಯಾಗತ್ತೂರು ತಂಡಕ್ಕೆ ನಾಯಕ ರಜಾಕ್ ಆಸರೆಯಾದರು. 22 ರನ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.