ನಾಪೆÇೀಕ್ಲು, ಏ. 28: ಸಮೀಪದ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಮೇ 1 ರಂದು ಭಕ್ತಜನ ಸಂಘದ ವತಿಯಿಂದ ಭಕ್ತ ಸಮಾರಾಧನೆ ಉತ್ಸವ ಮತ್ತು ವಾರ್ಷಿಕ ಮಹಾಸಭೆ ನಡೆಯಲಿದೆ. ಉತ್ಸವದ ಅಂಗವಾಗಿ ತುಲಾಭಾರ ಸೇವೆ, ದೇವರ ನೃತ್ಯ ಬಲಿ, ಅನ್ನಸಂತರ್ಪಣೆ ನಡೆಯಲಿದೆ ಎಂದು ಭಕ್ತಜನ ಸಂಘ, ಆಡಳಿತ ಮಂಡಳಿ ಹಾಗೂ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.