ಮಡಿಕೇರಿ, ಏ. 28: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2019-20ನೇ ಸಾಲಿನ ಪದವಿ ವ್ಯಾಸಂಗಕ್ಕೆ ದಾಖಲಾತಿ ಪ್ರಾರಂಭವಾಗಿದ್ದು, ಬಿಎ, ಬಿಕಾಂ, ಬಿಬಿಎಗಳಿಗೆ ಪದವಿ ವ್ಯಾಸಂಗ ಮಾಡಲು ಅವಕಾಶವಿದೆ. ಶಿಸ್ತುಬದ್ಧ ಶೈಕ್ಷಣಿಕ ವಾತಾವರಣ ಹಾಗೂ ಅನುಭವಿ ಉಪನ್ಯಾಸಕ ವರ್ಗದಿಂದ ಬೋಧನೆ ಹಾಗೂ ಉತ್ತಮ ಗ್ರಂಥಾಲಯ ವ್ಯವಸ್ಥೆಯಿದೆ. ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಉದ್ಯೋಗ ಮಾರ್ಗದರ್ಶನ ಮತ್ತು ಕ್ಯಾಂಪಸ್ ಆಯ್ಕೆ, ದೂರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯದ ಸೌಲಭ್ಯ, ಶಿಕ್ಷಕ ಮತ್ತು ಪೋಷಕರೊಂದಿಗೆ ಉತ್ತಮ ಬಾಂಧವ್ಯ, ಮಹಿಳಾ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಮತ್ತು ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಮತ್ತು ಕಡಿಮೆ ಆದಾಯ ಹೊಂದಿದವರಿಗೆ ಶುಲ್ಕ ವಿನಾಯಿತಿ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ವಿವಿಧ ವಿದ್ಯಾರ್ಥಿ ವೇತನ ಸೌಲಭ್ಯಗಳು ಅಗತ್ಯವಿರುವವರಿಗೆ ರಾಜೀವ್ ಗಾಂಧಿ ಸಾಲ ಯೋಜನೆ, ದೂರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯದ ಸೌಲಭ್ಯ, ಎನ್‍ಎಸ್‍ಎಸ್, ರೋವರ್ ಮತ್ತು ರೇಂಜರ್, ರೆಡ್‍ಕ್ರಾಸ್, ರೆಡ್ ರಿಬ್ಬನ್, ಸಾಂಸ್ಕøತಿಕ ವೇದಿಕೆ, ಕ್ರೀಡೆ, ಐಕ್ಯುಎಸಿ ಮುಂತಾದ ವೇದಿಕೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ. ಮುಂತಾದ ವಿಶೇಷತೆಗಳೊಂದಿಗೆ ದಾಖಲಾತಿ ಪ್ರಾರಂಭವಾಗಿದೆ. ಹೆಚ್ಚಿನ ಮಾಹಿತಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೂನಿಯರ್ ಕಾಲೇಜು ಆವರಣ, ಮಡಿಕೇರಿ ದೂರವಾಣಿ ಸಂಖ್ಯೆ 08272-223913 ನ್ನು ಹಾಗೂ ಇ-ಮೇಲ್ ವಿಳಾಸ ಠಿಡಿiಟಿಛಿiಠಿಚಿಟgಜಿgಛಿmಜಞ@gmಚಿiಟ.ಛಿom ನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.