ಮಡಿಕೇರಿ, ಏ. 28: ವೀರಾಜಪೇಟೆ ಬಾಳುಗೋಡು ಗ್ರಾಮದ ಕೊಡಗು ಹೆಗ್ಗಡೆ ವಿಧ್ಯಾಭಿವೃದ್ಧಿ ಸಂಘ ಮತ್ತು ಸಮಾಜದ ವತಿಯಿಂದ 18ನೇ ವರ್ಷದ ಕ್ರೀಡಾಕೂಟ ಮೇ 1 ರಿಂದ ಮೂರು ದಿನಗಳ ಕಾಲ ಹಾತೂರಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಮೇ 1 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಪಿ.ಜಿ. ಅಯ್ಯಪ್ಪ, ಡಾ. ಪಿ.ಜಿ. ಚಂಗಪ್ಪ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪಿ.ಸಿ. ಗಣಪತಿ, ಪಾನೀಕುಟ್ಟೀರ ಸೋಮಯ್ಯ ಇತರರು ಪಾಲ್ಗೊಳ್ಳಲಿದ್ದಾರೆ. ಮೇ 3 ರಂದು ಮಧ್ಯಾಹ್ನ 2.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಪಿ.ಜಿ. ಅಯ್ಯಪ್ಪ, ಹಾಲುಗುಂದ ಗ್ರಾ.ಪಂ. ಸದಸ್ಯರಾದ ಪಂದಿಕಂಡ ದಿನೇಶ್, ಕೊರಕುಟ್ಟಿರ ಸರಚಂಗಪ್ಪ, ಪಾನೀಕುಟ್ಟೀರ ಕಾರ್ಯಪ್ಪ, ಕಾಕೇರ ಪ್ರಜ್ವಲ್ ಮಂದಣ್ಣ ಇತರರು ಪಾಲ್ಗೊಳ್ಳಲಿದ್ದಾರೆ.