ಮಡಿಕೇರಿ, ಏ. 28: ಸರ್ಕಾರಿ ಶಾಲೆಗಳಲ್ಲಿ ‘ಸ್ವಲ್ಪ ಓದು, ಸ್ವಲ್ಪ ಮೋಜು’ ಆಧಾರಿತ ಬೇಸಿಗೆ ಸಂಭ್ರಮ ಕಲಿಕಾ ಕಾರ್ಯಕ್ರಮ ಮೇ 25 ರವರೆಗೆ ನಡೆಯಲಿದೆ.
ಬೇಸಿಗೆ ಅವಧಿಯಲ್ಲಿ ಶಾಲೆಗಳ ಓದಿನ ಜೊತೆಗೆ ಮೋಜಿರಲಿ ಎಂಬ ಉದ್ದೇಶದಿಂದ ವಾರಕ್ಕೊಂದು ವಿಷಯದಂತೆ ಚಟುವಟಿಕೆ ಆಧಾರಿತ ಸೃಜನಶೀಲ ಹಾಗೂ ಕ್ರಿಯಾಶೀಲವಾದ ಮತ್ತು ರಚನವಾದ ಆಧಾರಿತ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳು ತಮ್ಮ ಕಲಿಕಾ ಸಾಮಥ್ರ್ಯ ಹಾಗೂ ತರ್ಕಿಸುವ, ಆಲೋಚಿಸುವ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಪೂರಕವಾದ ಕಲಿಕಾ ಚಟುವಟಿಕೆಗಳನ್ನು ಭಾಷೆ, ಗಣಿತ, ವಿಜ್ಞಾನ ವಿಷಯಗಳ ಕುರಿತ ಚಟುವಟಿಕೆಗಳು ಹಾಗೂ ನಾಟಕ, ನೃತ್ಯ, ಅಭಿನಯ, ಚಿತ್ರಕಲೆ ಮತ್ತಿತರ ಸೃಜನಶೀಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
2019-20ನೇ ಶೈಕ್ಷಣಿಕ ಸಾಲಿಗೆ 6 ಮತ್ತು 7ನೇ ತರಗತಿಗೆ ದಾಖಲಾಗಲಿರುವ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮತ್ತು ಶಿಕ್ಷಕರು ಮಕ್ಕಳನ್ನು ಶಾಲೆಗೆ ಕರೆತರುವದರ ಮೂಲಕ ಉತ್ತಮ ಚಟುವಟಿಕೆಗಳನ್ನು ಆಯೋಜಿಸು ವದರೊಂದಿಗೆ ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸು ವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ಮತ್ತು ಡಯಟ್ ಕೂಡಿಗೆ ಪ್ರಾಂಶುಪಾಲರಾದ ಮತ್ತು ಉಪ ನಿರ್ದೇಶಕರಾದ ವಾಲ್ಟರ್ ಹೆಚ್. ಡಿಮೆಲ್ಲೋ ಹಾಗೂ ಶಿಕ್ಷಣಾಧಿಕಾರಿಗಳು ಅಕ್ಷರ ದಾಸೋಹ ಕಾರ್ಯಕ್ರಮದ ಅಧಿಕಾರಿ ಹೆಚ್.ಕೆ. ಪಾಂಡು ಅವರು ಕೋರಿದ್ದಾರೆ.