ಕೂಡಿಗೆ, ಏ. 30: ಕುಶಾಲನಗರದಿಂದ ಸೋಮವಾರಪೇಟೆಗೆ ತೆರಳುತ್ತಿದ್ದ ಖಾಸಗಿ ಬಸ್ ಹೆಬ್ಬಾಲೆ ಮಾರ್ಗವಾಗಿ ಹೋಗುವ ಸಂದರ್ಭ ಬಸ್‍ನ ಹಿಂಬದಿಯ ಟಯರ್ ಪಂಚರ್ ಅಗಿ ಮಾಡ್ ಗಾರ್ಡ್ ಹಾರಿದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ನಡೆದಿದೆ.

ಹಿಂಬದಿಯ ಸೀಟ್‍ನಲ್ಲಿ ಕುಳಿತಿದ್ದ ಮಹಿಳೆಯರಿಗೆ ಬಸ್ ಟಯರ್‍ನ ಮಾಡ್ ಗಾರ್ಡ್ ಹೊಡೆದು ಸಿದ್ಧಲಿಂಗಪುರದ ಸರೋಜ, ಕಣಗಾಲ್‍ನ ಮೀನಾಕ್ಷಿ ಎಂಬವರ ಕಾಲಿಗೆ ಪೆಟ್ಟಾಗಿದ್ದು, ಇವರಿಗೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಬಸ್ ಮಾಲೀಕರು ಕಳುಹಿಸಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.