ವೀರಾಜಪೇಟೆ, ಏ. 30 : ಕಳೆದ 12ದಿನಗಳ ಹಿಂದೆ ಕಡಂಗದ ಅರಪಟ್ಟು ಗ್ರಾಮದ ಪ್ರಮೀಳಾ(24) ಎಂಬಾಕೆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹೊಸ ತಿರುವು ಪಡೆದಿದ್ದು ಪತಿ ಚೇತನ್‍ನ (28) ಎರಡನೇ ಮದುವೆ, ಮಾನಸಿಕ ಹಿಂಸೆ ಹಾಗೂ ಪ್ರಚೋದನೆಯಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆಧಾರದ ಮೇಲೆ ಗ್ರಾಮಾಂತರ ಪೊಲೀಸರು ಇಂದು ಚೇತನ್ ವಿರುದ್ಧ ಐ.ಪಿ.ಸಿ 306 ಹಾಗೂ 498 ಪ್ರಕಾರ ಪ್ರಕರಣ ದಾಖಲಿಸಿ ಆತನನ್ನು ಕುಂಜಿಲಗೇರಿಯಲ್ಲಿ ಬಂಧಿಸಿದ್ದಾರೆ. ಚೇತನ್ ಐದು ವರ್ಷಗಳ ಹಿಂದೆ ಮಂಡ್ಯ ಮೂಲದ ಪ್ರಮೀಳಾಳನ್ನು ಪ್ರೀತಿಸಿ ಮದುವೆಯಾಗಿದ್ದು ದಂಪತಿಗೆ ಮೂರು ವರ್ಷದ ಗಂಡು ಮಗುವಿದೆ. ಚೇತನ್ ಮೊದಲನೇ ಪತ್ನಿಗೆ ಗೊತ್ತಿಲ್ಲದಂತೆ ಸೌಮ್ಯ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದನು. (ಮೊದಲ ಪುಟದಿಂದ) ಎರಡನೇ ಮದುವೆಯ ನಂತರ ಪ್ರಮೀಳಾಳಿಗೆ ಪತಿ ಸೇರಿದಂತೆ ಅತ್ತೆ ಸರೋಜ, ಮಾವ ನಾರಾಯಣ ನಿರಂತರ ಚಿತ್ರಹಿಂಸೆ ನೀಡುತ್ತಿದ್ದರೆನ್ನ ಲಾಗಿದೆ. ತಾ. 18ರಂದು ಮನೆಯಲ್ಲಿ ಯೇ ನೇಣು ಬಿಗಿದುಕೊಂಡಂತೆ ಪ್ರಮೀಳಾ ಮೃತ ದೇಹ ಪತ್ತೆಯಾಗಿತ್ತು. ಗ್ರಾಮಾಂತರ ಪೋಲಿಸರು ಈ ಪ್ರಕರಣವನ್ನು ಐ.ಪಿ.ಸಿ 174ರ ಪ್ರಕಾರ ಸಂಶಯಾಸ್ಪದ ಸಾವು ಎಂದು ದಾಖಲಿಸಿದ್ದರು.ಮಂಡ್ಯದಲ್ಲಿದ್ದ ಮೃತಳ ತಾಯಿ ಪ್ರೇಮ, ತಂದೆ ಶಿವಣ್ಣ ತನ್ನ ಮಗಳ ಆತ್ಮಹತ್ಯೆಯಲ್ಲ ಇದು ಉದ್ದೇಶಿತ ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ತಾಲೂಕು ತಹಶೀಲ್ದಾರ್ ಆತ್ಮಹತ್ಯೆ ಎಂದು ನೀಡಿದ ವರದಿಯ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಚೇತನ್ ಚಾಲಕನಾಗಿದ್ದು, ಈತನ ಅಜ್ಜಿ ಮನೆ ಕುಂಜಲಗೇರಿಯಲ್ಲಿ ರುವದಾಗಿ ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.ಸ್ತ್ರೀಶಕ್ತಿ ಗುಂಪುಗಳಿಂದ ದೂರು ಕಡಂಗ ಗ್ರಾಮದ ಬನಶಂಕರಿ ಸ್ತ್ರೀಶಕ್ತಿ ಗುಂಪು ಸೇರಿದಂತೆ ವಿವಿಧ ಸಂಘಟನೆಗಳು ಮೃತಳ ಪೋಷಕ ರೊಂದಿಗೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಸೇರಿ ಪ್ರಮೀಳಾಳ ಪ್ರಕರಣವನ್ನು ಕೊಲೆ ಎಂದು ದಾಖಲಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರಲ್ಲದೆ ಸಂಘಟನೆಗಳಿಂದ ಖುದ್ದು ದೂರು ನೀಡಿದ್ದರು.ಇಂದು ಸಂಜೆ ಸುಮಾರು 30ಮಂದಿ ಮಹಿಳೆಯರು ಮಂಡ್ಯ ದಿಂದ ಬಂದಿದ್ದು ಮೂರು ಮಂದಿ ಪುರುಷರು ಠಾಣೆ ಮುಂದೆ ರಾತ್ತಿ ಏಳು ಗಂಟೆಯವರೆಗೂ ಜಮಾಯಿಸಿದ್ದರು. ಚೇತನ್ ಹಾಗೂ ಈತನ ತಂದೆ ತಾಯಿ ಉದ್ದೇಶಿತವಾಗಿ ಕೊಲೆಗೈದಿ ರುವ ಬಗ್ಗೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ. ಪ್ರಮೀಳಾ ಆತ್ಮಹತ್ಯೆ ಮಾಡಿಕೊಳ್ಳುವ ಮಹಿಳೆಯಲ್ಲ. ಕಳೆದ ಆರು ವರ್ಷಗಳ ಹಿಂದೆ ಪ್ರಮೀಳಾ ಕೊಡಗಿನ ಕಡಂಗ ಗ್ರಾಮಕ್ಕೆ ಬಂದು ನೆಲೆಸಿದ್ದಾಗ ಚೇತನ್ ಹಾಗೂ ಪ್ರಮೀಳಾಳ ನಡುವೆ ಪ್ರೇಮ ಉಂಟಾಗಿ ಮದುವೆಯ ತನಕ ತಲುಪಿತ್ತು ಎಂದು ಮಹಿಳೆಯರ ಸಂಘಟನೆ ಮಾಧ್ಯಮದವರಿಗೆ ತಿಳಿಸಿದರು.ಕಡಂಗದ ವಿವಿಧ ಸಂಘಟನೆಗಳ ಸುಶೀಲ, ನಾಗಮ್ಮ, ಸುಮ, ಜಾನಕಿ, ಆಶಾ, ಪುಷ್ಪ. ಕಾವೇರಿ ಜ್ಯೋತಿ ಸೇರಿದಂತೆ 30ಕ್ಕೂ ಅಧಿಕ ಮಹಿಳೆಯರು ಠಾಣೆಯಲ್ಲಿ ಜಮಾಯಿಸಿದ್ದರು.