ಇಬ್ಬರು ಯುವಕರ ಬಂಧನ

ವೀರಾಜಪೇಟೆ, ಮೇ 2: ವೀರಾಜಪೇಟೆ ಗೋಣಿಕೊಪ್ಪ ರಸ್ತೆಯಲ್ಲಿರುವ ವಿದ್ಯಾನಗರದ ಶಾಲೆಯ ಬಳಿ ಅಕ್ರಮವಾಗಿ ಸಿಗರೇಟಿನ ಮಾದರಿಯ ಕಾಗದದ ಪೈಪಿನಲ್ಲಿ ಗಾಂಜಾ ಹುಡಿಯನ್ನು ತುಂಬಿಸಿ ಸೇವನೆ ಮಾಡುತ್ತಿದ್ದ ಇಲ್ಲಿನ ಕಲ್ಲುಬಾಣೆಯ ಮಿಥುನ್ ಹಾಗೂ ಶಿಯಾಬ್ ಎಂಬಿಬ್ಬರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ನಗರ ಪೊಲೀಸರು ಕಲಂ 27 ಎನ್.ಡಿ.ಪಿ.ಎಸ್. ವಿಧಿ ಪ್ರಕಾರ ಪ್ರಕರಣ ದಾಖಲಿಸಿದ್ದು ಇಬ್ಬರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದಾಗ ಈ ಇಬ್ಬರು ಗಾಂಜಾ ಸೇವನೆ ಮಾಡಿದ್ದು ದೃಢೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.