ಮಡಿಕೇರಿ, ಮೇ 2: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಏಯ್ಮ್ಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ಪಿಯುಸಿ ಪಾಸಾಗಿರುವ ಕಡು ಬಡ ಮಕ್ಕಳು ಬಿ.ಎ., ಬಿ.ಕಾಂ. (ವಿವಿಧ ತರಬೇತಿಗಳು ಸೇರಿ) ಶಿಕ್ಷಣ ಪಡೆಯಲು ಬಯಸಿದರೆ, ಊಟ, ವಸತಿ, ಪಠ್ಯ ಪುಸ್ತಕವನ್ನು ಉಚಿತವಾಗಿ ನೀಡಿ ಶಿಕ್ಷಣ ನೀಡಲಾಗುತ್ತಿದೆ. ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಪ್ರವೇಶ ಉಚಿತ ಹಾಸ್ಟೆಲ್ ವ್ಯವಸ್ಥೆಯಿದೆ. ವಿದ್ಯಾರ್ಥಿಗಳು ಸರಕಾರಿ ಶುಲ್ಕ ಮಾತ್ರ ಪಾವತಿ ಮಾಡಬೇಕಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಫೌಜಿಯಾ ಬಿ.ಎಸ್. (9880642055) ಇವರನ್ನು ಸಂಪರ್ಕಿಸಬಹುದಾಗಿದೆ.