ಮಡಿಕೇರಿ, ಮೇ 2: ಮಹಿಳೆ ಯೋರ್ವರು ನಾಪತ್ತೆ ಯಾಗಿರುವ ಕುರಿತು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ಕೈಕಾಡು ಗ್ರಾಮದ ನಿವಾಸಿ ಎ.ಜಿ. ಉಷಾ ಅವರು ಏ. 26 ರಂದು ಮನೆಯಿಂದ ತೆರಳಿದವರು ಹಿಂತಿರುಗಿಲ್ಲ ಎಂದು ಅವರ ಸಂಬಂಧಿಕರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ನಾಪೋಕ್ಲು ಠಾಣೆ (237240)ಗೆ ತಿಳಿಸುವಂತೆ ಪ್ರಕಟಣೆ ಕೋರಿದೆ.