ಚೆಟ್ಟಳ್ಳಿ, ಮೇ 2: ಜಿಲ್ಲೆಯ ಪ್ರಪ್ರಥಮ ಸಮನ್ವಯ ವಿದ್ಯಾಸಂಸ್ಥೆ ಅನ್ವಾರುಲ್ ಹುದಾದಲ್ಲಿ ಎಸ್.ಎಸ್.ಎಫ್. ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು ಇಸ್ಮಾಯಿಲ್ ಸಖಾಫಿ ಹಾಗೂ ಅಬ್ದುರ್ರಹ್ಮಾನ್ ಅಹ್ಸನಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಹಾಬುದ್ದೀನ್ ಅನ್ವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಖೆ ಕಾರ್ಯದರ್ಶಿ ಮುಜೀಬ್, ಉಪನ್ಯಾಸಕ ಇಬ್ರಾಹಿಂ ಮಾಷ್ಟರ್, ಖಮರುದ್ದೀನ್ ಸಖಾಫಿ ಉಪಸ್ಥಿತರಿದ್ದರು.