ಮಡಿಕೇರಿ, ಮೇ 3: ಶ್ರೀಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಜಿಲ್ಲೆಗೆ ಆಗಮಿಸಿದ್ದು, ತಾ. 4 ರಂದು (ಇಂದು) ವೀರಾಜಪೇಟೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಶ್ರೀ ಸೀತಾರಾಮಚಂದ್ರ, ಚಂದ್ರಮೌಳೇಶ್ವರ, ರಾಜರಾಜೇಶ್ವರಿ ದೇವರುಗಳಿಗೆ ಪೂಜೆ ಸಲ್ಲಿಸುವರು. ನಂತರ 10 ರಿಂದ 11.30ರವರೆಗೆ ಮಾಯಮುಡಿಯಲ್ಲಿ ನಡೆಯಲಿ ರುವ ಅಮ್ಮಕೊಡವರ ಆಟೋಟ ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು. ನಂತರ ಗುರುಬಿಕ್ಷಾ ಸೇವೆ, ಪೂಜೆ ಬಳಿಕ ಆಶೀರ್ವಚನ ನೀಡಲಿರುವರು.