ಮಡಿಕೇರಿ, ಮೇ 3: ಮಡಿಕೇರಿಯ ಶ್ರೀ ಇಗ್ಗುತಪ್ಪ ಕೊಡವ ಕೇರಿ ಸಂಘದ ವಾರ್ಷಿಕ ಮಹಾಸಭೆ ತಾ. 6 ರಂದು ಸಂಜೆ 5 ಗಂಟೆಗೆ ನಗರದ ಕೊಡವ ಸಮಾಜದಲ್ಲಿ ಜರುಗಲಿದೆ. ಸಂಘದ ಅಧ್ಯಕ್ಷೆ ಚೌರೀರ ಕಾವೇರಿ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ಸಭೆ ನಿಗದಿಯಾಗಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಹಿನ್ನೆಲೆಯಲ್ಲಿ ಕೇರಿಯ ಸಂತೋಷ ಕೂಟವನ್ನು ಕೈಬಿಡಲಾಗಿತ್ತು. ಈ ಸಂದರ್ಭದಲ್ಲಿ ನಡೆಯುತ್ತಿದ್ದ ಮಹಾಸಭೆಯೂ ಇದರಿಂದ ಮುಂದೂಡಲ್ಪಟ್ಟಿದ್ದರಿಂದ ಇದೀಗ ತಾ. 6 ರಂದು ಸಂಜೆ 5ಕ್ಕೆ ಮಹಾಸಭೆಯನ್ನು ಆಯೋಜಿಸ ಲಾಗಿದೆ ಎಂದು ಕಾರ್ಯದರ್ಶಿ ಬೊಳ್ಳಾರ್‍ಪಂಡ ಲೀಲಾ ಅವರು ತಿಳಿಸಿದ್ದಾರೆ.