ಕೂಡಿಗೆ, ಜು. 8: ಕೂಡಿಗೆ ಗಾ.ಪಂ.ಯ ಶೇ. 25 ರ ಅನುದಾನದಲ್ಲಿ ಅಕಾಲಿಕ ಮರಣ ಹೊಂದಿದ ಪರಿಶಿಷ್ಟ ಜಾತಿ ರಾಜನ ಪತ್ನಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸಹಾಯ ಧನ ರೂಪದಲ್ಲಿ ರೂ. 5 ಸಾವಿರವನ್ನು ನೀಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಕೆ. ವಿಶ್ವನಾಥ, ಕೃಷ್ಣ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ, ಕಾರ್ಯದರ್ಶಿ ಶಿಲ್ಪ ಕರ ವಸೂಲಿಗಾರ ಕೆ.ಸಿ. ರವಿ ಇದ್ದರು.