ನಾಪೆÇೀಕ್ಲು, ಜು. 8: ಸರಕಾರ ಗ್ರಾಮೀಣ ಪ್ರದೇಶದ ಶೈಕ್ಷಣಾಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು, ನೂತನ ವಿಷಯ ವಿಭಾಗಗಳನ್ನು, ಘಟಕಗಳನ್ನು ಆರಂಭಿಸುತ್ತಲೇ ಇದೆ. ಇದಕ್ಕಾಗಿ ಕೋಟ್ಯಾಂತರ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಆದರೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಎಲ್ಲಾ ಯೋಜನೆಗಳು ಒಂದೆರಡು ವರ್ಷಗಳಲ್ಲಿ ನೆಲಕಚ್ಚುತ್ತದೆ. ಇದನ್ನು ನಂಬಿದ ಬಡ ವಿದ್ಯಾರ್ಥಿಗಳು ಮತ್ತು ಪೆÇೀಷಕರು ನಿರಂತರ ಸಂಕಷ್ಟವನ್ನು ಎದುರಿಸುತ್ತಲೇ ಇದ್ದಾರೆ.
ನಾಪೆÇೀಕ್ಲು ಪದವಿ ಪೂರ್ವ ಕಾಲೇಜಿನಲ್ಲಿ ಹಿಂದೆ ವಿಜ್ಞಾನ ವಿಭಾಗವಿರಲಿಲ್ಲ. ಇದಕ್ಕಾಗಿ ವಿದ್ಯಾರ್ಥಿಗಳು ಮೂರ್ನಾಡು, ಮಡಿಕೇರಿ, ವೀರಾಜಪೇಟೆ ಕಾಲೇಜುಗಳಿಗೆ ತೆರಳಬೇಕಾಗಿತ್ತು. ಈ ಸಮಸ್ಯೆಯನ್ನು ನಿವಾರಿಸಲು ಸರಕಾರ ಇಲ್ಲಿ ವಿಜ್ಞಾನ ವಿಭಾಗವನ್ನು ಆರಂಭಿಸಿತು. ಇಲ್ಲಿಯವರೆಗೆ ಹಲವು ಎಡರು ತೊಡರುಗಳ ನಡುವೆ ಸಾಗಿ ಬಂದಿದ್ದ ವಿಜ್ಞಾನ ವಿಭಾಗವನ್ನು ನಾಪೆÇೀಕ್ಲುವಿನಲ್ಲಿ ಶಾಶ್ವತವಾಗಿ ಇಲ್ಲವಾಗಿಸಲು ಕಾಣದ ಕೈಗಳು ಕೆಲಸ ಮಾಡುತ್ತಿರುವಂತೆ ಕಂಡು ಬರುತ್ತಿದೆ.
ಒಂದೆಡೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿಜ್ಞಾನ ವಿಭಾಗಕ್ಕೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬೇಡಿ ಎಂದು ಅಲಿಖಿತ ಸೂಚನೆ ನೀಡಿದ್ದರೆ, ಪಿ.ಯು ಬೋರ್ಡ್ ಏಕೆ ದಾಖಲಾತಿ ಮಾಡಿಕೊಂಡಿಲ್ಲ ಎಂದು ಪ್ರಶ್ನೆ ಮಾಡುತ್ತಿರುವದಾಗಿ ಬಲ್ಲಮೂಲ ಗಳಿಂದ ತಿಳಿದು ಬಂದಿದೆ. ಅದರೊಂದಿಗೆ ವಿಜ್ಞಾನ ವಿಭಾಗದ ಉಪನ್ಯಾಸಕರನ್ನು ಬೇರೆ ಕಡೆಗಳಿಗೆ ವರ್ಗಾವಣೆ ಮಾಡುವ ಕಾರ್ಯಕ್ಕೆ ಇಲಾಖೆ ಸಜ್ಜಾಗಿದೆ. ಈಗಾಗಲೇ ಐದಾರು ವಿದ್ಯಾರ್ಥಿಗಳು ವಿಜ್ಞಾನ ವಿಭಾಗಕ್ಕೆ ಸೇರ್ಪಡೆಗೊಳ್ಳಲು ಕಾಯುತ್ತಿರುವದಾಗಿಯೂ ತಿಳಿದು ಬಂದಿದೆ.
10ನೇ ತರಗತಿಯ ಮರು ಪರೀಕ್ಷೆಯ ಫಲಿತಾಂಶ ಇನ್ನು ಬರಬೇಕಾಗಿದ್ದು, ಅದರಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ವಿಜ್ಞಾನ ವಿಭಾಗಕ್ಕೆ ಬರುವ ಸಾಧ್ಯತೆಯೂ ಇದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವದು ಸರಿಯಲ್ಲ ಎಂದಿರುವ ಸಾರ್ವಜನಿಕರು ಈ ಬಗ್ಗೆ ಶಾಸಕರು, ಸಂಬಂಧಪಟ್ಟವರು ಕಾಳಜಿ ತೋರುವಂತೆ ಆಗ್ರಹಿಸಿದ್ದಾರೆ.