ಕರಿಕೆ, ಜು. 8: ಕೊಡಗು ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಿ ಕೊಡಗು ಜಿಲ್ಲಾಧಿಕಾರಿಗಳು ಈ ಹಿಂದೆಯೇ ಆದೇಶ ಹೊರಡಿಸಿದ್ದಾರೆ. ಇದರಂತೆ ಈ ಸಾಗಾಟವೂ ನಿರ್ಬಂಧಿತವಾಗಿದೆ. ಇದರ ನಡುವೆ ಇದೀಗ ಸರಕಾರಿ ಕಾರ್ಯದ ನಿಮಿತ್ತ ಮರ ಸಾಗಾಟದ ಕಾರಣದಂತೆ ಕೇರಳದ ಕಾಸರಗೋಡು ಜಿಲ್ಲಾಧಿ ಕಾರಿಗಳ ಕೋರಿಕೆಯಂತೆ ನಿರ್ದಿಷ್ಟ ಪ್ರಕರಣ ವೊಂದಕ್ಕೆ ಈ ನಿರ್ಬಂಧವನ್ನು ಸಡಿಲಗೊಳಿಸಿ ಕೊಡಗು ಜಿಲ್ಲಾಧಿಕಾರಿಗಳು ಮತ್ತೊಂದು ಆದೇಶ ಕರಿಕೆ, ಜು. 8: ಕೊಡಗು ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಿ ಕೊಡಗು ಜಿಲ್ಲಾಧಿಕಾರಿಗಳು ಈ ಹಿಂದೆಯೇ ಆದೇಶ ಹೊರಡಿಸಿದ್ದಾರೆ. ಇದರಂತೆ ಈ ಸಾಗಾಟವೂ ನಿರ್ಬಂಧಿತವಾಗಿದೆ. ಇದರ ನಡುವೆ ಇದೀಗ ಸರಕಾರಿ ಕಾರ್ಯದ ನಿಮಿತ್ತ ಮರ ಸಾಗಾಟದ ಕಾರಣದಂತೆ ಕೇರಳದ ಕಾಸರಗೋಡು ಜಿಲ್ಲಾಧಿ ಕಾರಿಗಳ ಕೋರಿಕೆಯಂತೆ ನಿರ್ದಿಷ್ಟ ಪ್ರಕರಣ ವೊಂದಕ್ಕೆ ಈ ನಿರ್ಬಂಧವನ್ನು ಸಡಿಲಗೊಳಿಸಿ ಕೊಡಗು ಜಿಲ್ಲಾಧಿಕಾರಿಗಳು ಮತ್ತೊಂದು ಆದೇಶ ಹಾದು ಹೋಗುವ ರಸ್ತೆಯ ಮುಖಾಂತರ ಸಾಗಿಸಬೇಕಾಗಿದೆ. ಈ ಕಾರಣಕ್ಕಾಗಿ ನಿರ್ಬಂಧದಿಂದ ವಿನಾಯಿತಿ ನೀಡುವಂತೆ ಕಾಸರ ಗೋಡು ಜಿಲ್ಲೆಯ ಜಿಲ್ಲಾಧಿಕಾರಿಗಳು ತಾ. 1.7.2019 ರಂದು ಕೊಡಗು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿನಂತಿಸಿದರು.ಇದು ಸರಕಾರಿ ಕಾರ್ಯದ ನಿಮಿತ್ತ ನಡೆಸಲಾಗುತ್ತಿರುವ ಕಾರ್ಯವಾಗಿರುವದರಿಂದ ನಿರ್ಬಂಧದಿಂದ ವಿನಾಯಿತಿ ನೀಡಲು ಅವರು ಕೋರಿದ್ದರು. ಇದರಂತೆ ಸದರಿ ವಾಹನಗಳಿಗೆ ಮರಸಾಗಾಟದಿಂದ ನಿರ್ಬಂಧ ಹೇರಿಕೆಯನ್ನು ಸಡಿಲಿಸಿ ತಮ್ಮ ಅಧೀನದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ ಸೂಚನೆ ನೀಡಿರುವದು ಬೆಳಕಿಗೆ ಬಂದಿದೆ.

ಆದರೆ ಇದೀಗ ಮತ್ತೊಂದು ಆದೇಶ ಹೊರಡಿಸ ಲಾಗಿದ್ದು, ಮಳೆಗಾಲವಾದ್ದರಿಂದ ಕೊಡಗಿನ ಹೆದ್ದಾರಿಗಳಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರೆ ರಸ್ತೆಗಳು ಹಾನಿಗೊಳಗಾಗುತ್ತವೆ ಎಂಬ ಕಾರಣಕ್ಕಾಗಿ ಆಗಸ್ಟ್ 8ರ ವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಇತ್ತೀಚೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದರು.

ಆದರೆ, ಇದೀಗ ಕರಿಕೆ-ಭಾಗಮಂಡಲ ಅಂತರ್ರಾಜ್ಯ ಹೆದ್ದಾರಿಯಲ್ಲಿ ಎಳ್ಳುಕೊಚ್ಚಿಯಿಂದ ಚೆಂಬೇರಿವರೆಗಿನ 5 ಕಿ.ಮೀ. ರಸ್ತೆಯಲ್ಲಿ ಟಿಂಬರ್ ಲಾರಿಗಳು ರಾಜಾ ರೋಷವಾಗಿ ಸಂಚರಿಸುತ್ತಿದ್ದು, ಈ ಬಗ್ಗೆ ‘ಶಕ್ತಿ’ ಮಾಹಿತಿ ಕಲೆಹಾಕಿದ ಸಂದರ್ಭ ಕೊಡಗು ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿಯೆ ಈ ಲಾರಿಗಳು ಸಂಚರಿಸುತ್ತಿರುವದು ಖಚಿತಗೊಂಡಿದೆ.

ಆದರೆ ಕರಿಕೆ ಭಾಗದಲ್ಲಿ ಅರಣ್ಯದ ಮೂಲಕ ಹಾದು ಹೋಗುವ 2 ಕಿ.ಮೀ. ರಸ್ತೆಯೆ ಇಲ್ಲ ಎಂಬದು ಗಮನಿಸ ಬೇಕಾದ ಅಂಶವಾಗಿದ್ದು, ಇಲ್ಲಿ ಕರಿಕೆ-ಭಾಗಮಂಡಲ ಹೆದ್ದಾರಿ ಮೂಲಕವೇ ಟಿಂಬರ್ ಲಾರಿಗಳು ಸಂಚರಿಸುತ್ತಿವೆ. ಇದರ ಪರಿಣಾಮ ರಸ್ತೆಗಳು ಹಾಳಾಗುತ್ತಿವೆ ಎಂದು ಸ್ಥಳೀಯರಿಂದ ಆಕ್ಷೇಪ ವ್ಯಕ್ತಗೊಂಡಿದೆ.

ಇದ್ಯಾವ ನ್ಯಾಯ?

ಭಾರೀ ವಾಹನಗಳ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದ ಜಿಲ್ಲಾಧಿಕಾರಿಗಳು ಇದೀಗ ಕರಿಕೆ ಭಾಗದಲ್ಲಿ ನಿರ್ಬಂಧಕ್ಕೆ ವಿನಾಯಿತಿ ನೀಡಿ ಆದೇಶ ಮಾಡಿರುವದು ಎಷ್ಟು ಸರಿ? ಸರಕಾರಿ ಕೆಲಸ ನೆಪದಲ್ಲಿ ವಿನಾಯಿತಿ ನೀಡಿದ್ದರೂ ಕೂಡ ಅದರಿಂದ ರಸ್ತೆಗಳ ಮೇಲಾಗುವ ಪರಿಣಾಮ ತಪ್ಪಿದ್ದಲ್ಲ.

‘ಶಕ್ತಿ’ಗೆ ಬಲ್ಲ ಮೂಲಗಳಿಂದ ದೊರೆತ ಮಾಹಿತಿ ಅನ್ವಯ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಸಚಿವರೊಬ್ಬರು ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾಗಿ ತಿಳಿದು ಬಂದಿದೆ. ಅದೇನೆ ಇದ್ದರೂ ಉಳ್ಳವರಿಗೊಂದು ನ್ಯಾಯ, ಇಲ್ಲದವರಿಗೆ ಮತ್ತೊಂದು ನ್ಯಾಯ ಎಂಬ ಆಡಳಿತ ವ್ಯವಸ್ಥೆಯ ನೀತಿಯ ಬಗ್ಗೆ ಜನವಲಯದಲ್ಲಿ ಟೀಕೆ ವ್ಯಕ್ತವಾಗಿದೆ.

-ಹೊದ್ದೆಟ್ಟಿ ಸುಧೀರ್