ಗೋಣಿಕೊಪ್ಪ ವರದಿ, ಜು. 8 : ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಶಿಬಿರದಲ್ಲಿ ಸುಮಾರು 40 ಜನರು ರಕ್ತದಾನ ಮಾಡಿದರು. ನಂತರ ಜೆಸಿಐ ವತಿಯಿಂದ ಜಿಲ್ಲಾ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ. ಕರುಂಬಯ್ಯ ಅವರಿಗೆ ಹಸ್ತಾಂತರ ಮಾಡಲಾಯಿತು. ಶಿಬಿರವನ್ನು ಪಾಲಿಬೆಟ್ಟ ಗ್ರಾ.ಪಂ. ಅಧ್ಯಕ್ಷ ಪುಲಿಯಂಡ ಬೋಪಣ್ಣ ಉದ್ಘಾಟಿಸಿದರು. ಈ ಸಂದರ್ಭ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು ,ಸ್ಥಳೀಯ ಕಾರ್ಯಕರ್ತ ಮುನೀರ್, ಜೆಸಿಐ ಪ್ರಮುಖರುಗಳಾದ ಕಳ್ಳಿಚಂಡ ಸುಮಿ ರಾಬಿನ್, ಮಂಡೆಚಂಡ ನೇತ್ರಾ, ತೀತಿಮಾಡ ಪವಿ, ಮಂಡಂಗಡ ಪುನಿತಾ ಉಪಸ್ಥಿತರಿದ್ದರು.