ವೀರಾಜಪೇಟೆ, ಜು. 8: ವೀರಾಜಪೇಟೆ ಬಳಿಯ ಹಾತೂರು ಗ್ರಾಮದ ವೃದ್ಧ ದಂಪತಿ ಕೊಕ್ಕಂಡ ರಾಜು ಅಯ್ಯಪ್ಪ ಕಮಲ ಎಂಬವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ಹನ್ನೊಂದು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಪ್ರಕರಣದ ಎರಡನೇ ಆರೋಪಿ ಎಸ್.ಸಿ.ನಾಗೇಶ್ ಅಲಿಯಾಸ್ ದೊಡ್ಡ (36) ಎಂಬಾತನನ್ನು ಗೋಣಿಕೊಪ್ಪ ಪೊಲೀಸರ ತನಿಖಾ ತಂಡ ಸೋಮವಾರಪೇಟೆ ತಾಲೂಕಿನ ಕರ್ಕಳ್ಳಿಯ ರಾಜು ಎಂಬವರ ಕಾಫಿ ತೋಟದಲ್ಲಿ ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.ಕಳೆದ 11-10-2008 ರಂದು ಬೆಳಿಗ್ಗೆ 10 ಗಂಟೆಗೆ ಹಾತೂರು ಗ್ರಾಮದ ಕೊಕ್ಕಂಡ ರಾಜು ಅಯ್ಯಪ್ಪ ಅವರ ಕಾಫಿ ತೋಟದಲ್ಲಿ ಕೆಲಸಕ್ಕಿದ್ದ ಬಿ.ಆರ್.ಸುರೇಶ್ ಹಾಗೂ ನಾಗೇಶ್ ನಗದು, ಆಭರಣ ದೋಚುವ ದೃಷ್ಟಿಯಿಂದ ಮೊದಲು ರಾಜು ಅಯ್ಯಪ್ಪನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ

ಮೃತದೇಹವನ್ನು ಕಾಫಿ ತೋಟದಲ್ಲಿ ಗುಂಡಿಯಲ್ಲಿ ಬಾಳೆಲೆಯಲ್ಲಿ

(ಮೊದಲ ಪುಟದಿಂದ) ಮುಚ್ಚಿದ ನಂತರ ವೃದ್ದೆ ಕಮ¯ಳನ್ನು ಸ್ಟೋರ್ ರೂಮಿಗೆ ಕಳಿಸಿ ಇಬ್ಬರು ಸೇರಿ ಅಲ್ಲಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ಹಣ, ಆಭರಣಗಳನ್ನು ದೋಚಿ ಪರಾರಿಯಾಗಿದ್ದು, ಮೊದಲನೇ ಆರೋಪಿ ಸುರೇಶ್‍ನನ್ನು ಪೊಲೀಸರು ತಕ್ಷಣ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.

ಈ ಜೋಡಿ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ನಾಗೇಶನ ಪತ್ತೆಗಾಗಿ ಗೋಣಿಕೊಪ್ಪ ಪೊಲೀಸರ ತನಿಖಾ ತಂಡವನ್ನು ರಚಿಸಿದರೂ ನಾಗೇಶ್‍ನ ಸುಳಿವು ದೊರೆಯದ್ದರಿಂದ ಆತನ ಶೋಧನೆ ಮುಂದುವರೆಸಿದ್ದರು.

ವೀರಾಜಪೇಟೆ ಡಿ.ವೈ.ಎಸ್.ಪಿ ನಾಗಪ್ಪ ಅವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ಸರ್ಕಲ್ ಇನ್ಸ್‍ಪೆಕ್ಟರ್ ದಿವಾಕರ್ ಅವರ ನಿರ್ದೇಶನದಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಶ್ರೀಧರ್ ಅವರ ನೇತೃತ್ವದಲ್ಲಿ ಸುರೇಂದ್ರ, ನಂಜಪ್ಪ, ಉಮೇಶ್, ಮಹಮ್ಮದ್ ಆಲಿ ಕೊಲೆ ಪ್ರಕರಣದ ಎರಡನೇ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ನಾಗೇಶ್ ತನ್ನ ಪತ್ನಿ ಮಕ್ಕಳೊಂದಿಗೆ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸಿಸುತ್ತಿದ್ದನೆಂದು ಡಿವೈಎಸ್‍ಪಿ ನಾಗಪ್ಪ ತಿಳಿಸಿದ್ದಾರೆ.