ಮಡಿಕೇರಿ, ಜು. 9: ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಆಶಾದಾಯಕವಾಗಿ ಸುರಿಯುತ್ತಿದ್ದ ಪುನರ್ವಸು ಮಳೆ ಕೂಡ ಕ್ಷೀಣಗೊಂಡಂತೆ ಬಾಸವಾಗತೊಡಗಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 0.68 ಇಂಚು ಮಾತ್ರ ಜಿಲ್ಲೆಯಲ್ಲಿ ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಶಾಂತಳ್ಳಿ ವ್ಯಾಪ್ತಿಯಲ್ಲಿ ಮಾತ್ರ ಕಳೆದ 24 ಗಂಟೆಗಳಲ್ಲಿ ಸರಾಸರಿ ಒಂದು ಇಂಚು ಮಳೆಯಾಗಿದೆ.

ಉಳಿದಂತೆ ತಲಕಾವೇರಿಗೆ ಸರಾಸರಿ 2 ಇಂಚು, ಭಾಗಮಂಡಲ 1.91 ಇಂಚು, ನಾಪೋಕ್ಲು 1.01 ಇಂಚು, ಸಂಪಾಜೆ 0.50, ವೀರಾಜಪೇಟೆ 0.45, ಹುದಿಕೇರಿ 0.94 ಇಂಚು, ಶ್ರೀಮಂಗಲ 0.51, ಪೊನ್ನಂಪೇಟೆ 0.52 ಹಾಗೂ ಅಮ್ಮತ್ತಿ 0.25 ಇಂಚು ಮಳೆಯಾಗಿದೆ. ಸೋಮವಾರಪೇಟೆ 0.75 ಇಂಚು, ಶನಿವಾರಸಂತೆ 0.15, ಕೊಡ್ಲಿಪೇಟೆ 0.46, ಕುಶಾಲನಗರ 0.05 ಹಾಗೂ ಸುಂಟಿಕೊಪ್ಪ 0.23 ಇಂಚು ಮಳೆ ದಾಖಲಾಗಿದೆ.

ಮಡಿಕೇರಿ ತಾಲೂಕಿನಲ್ಲಿ ವರ್ಷಾರಂಭದಿಂದ ಇದುವರೆಗೆ 30.01 ಇಂಚು, ಸೋಮವಾರಪೇಟೆ ತಾಲೂಕಿಗೆ 14.64 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 28.81 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಅವಧಿಗೆ ಮಡಿಕೇರಿ ತಾಲೂಕು 87.95 ಇಂಚು, ಸೋಮವಾರಪೇಟೆ ತಾಲೂಕು 45.07 ಇಂಚು, ವೀರಾಜಪೇಟೆ ತಾಲೂಕು 56.23 ಇಂಚು ಮಳೆಯಾಗಿತ್ತು. ಜಿಲ್ಲೆಗೆ ಈ ಸಾಲಿನಲ್ಲಿ ಸರಾಸರಿ 24.48 ಇಂಚು ಮಳೆಯಾಗಿದ್ದು, ಕಳೆದ ವರ್ಷ ಈ ಅವಧಿಗೆ 63.08 ಇಂಚು ದಾಖಲಾಗಿತ್ತು.

ಹಾರಂಗಿ : ಹಾರಂಗಿ ಜಲಾಶಯದಲ್ಲಿ ಗರಿಷ್ಠ 2859 ಅಡಿಗಿಂತ ಪ್ರಸಕ್ತ 2813.02 ಅಡಿ ನೀರಿದ್ದು; 46 ಅಡಿಗಳಷ್ಟು ಕ್ಷೀಣವಾಗಿದೆ. ಕಳೆದ ವರ್ಷ ಈ ವೇಳೆಗೆ 2857.43 ಅಡಿ ನೀರು ಸಂಗ್ರಹಗೊಂಡಿತ್ತು.