ಕುಶಾಲನಗರ, ಜು. 9: ಕುಶಾಲನಗರದ ನೆಹರು ಬಡಾವಣೆಯಲ್ಲಿ ಡೆಂಗ್ಯು ಜ್ವರದ ಬಾಧೆ ಕಂಡುಬಂದಿದೆ. ಅಲ್ಲಿನ ಯುವತಿಯೊಬ್ಬಳಿಗೆ ಡೆಂಗ್ಯೂ ಬಾಧಿಸಿದ್ದು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬಡಾವಣೆಯ ನಿವಾಸಿ ದೇವರಾಜು ಎಂಬವರ ಪುತ್ರಿ ತೀವ್ರ ಜ್ವರದಿಂದ ಬಳಲುತ್ತಿದ್ದು ಡೆಂಗ್ಯೂ ಬಾಧಿಸಿರುವದು ದೃಢಪಟ್ಟಿದೆ. ಇದೇ ಬಡಾವಣೆಯಲ್ಲಿ 5ಕ್ಕೂ ಅಧಿಕ ಮಂದಿ ಕೂಡ ಜ್ವರದಿಂದ ಬಳಲುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಮೂಲಕ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.