ಸಿದ್ದಾಪುರ. ಜು. 9 ವ್ಯಕ್ತಿಯೋರ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 10 ದಿನಗಳ ಹಿಂದೆ ಹೊಸ್ಕೇರಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಅರೆಕಾಡು ನಿವಾಸಿ ಪ್ರಭುಶೇಖರ್ ಎಂಬವರ ಮನೆಗೆ ಅರೆಕಾಡು ಗ್ರಾಮದ ನಿವಾಸಿ ದೋಲ್ಪಾಡಿ ಯಶವಂತ್ ಮಧ್ಯರಾತ್ರಿ ಪ್ರವೇಶಮಾಡಿ ಪ್ರಭುಶೇಖರ್ ತಲೆಗೆ ಕತ್ತಿಯಿಂದ ಕಡಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಘಟನೆಯ ನಂತರ ಯಶವಂತ್ ತಲೆಮರೆಸಿಕೊಂಡಿದ್ದನು.
ಈ ಬಗ್ಗೆ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ತಲೆಮರೆಸಿಕೊಂಡಿದ್ದ ಆರೋಪಿ ಯಶವಂತನನ್ನುಅಪರಾಧ ಪತ್ತೆ ದಳದ ಪೊಲೀಸರು ಸೆರೆಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.