ಮಡಿಕೇರಿ, ಜು. 9: ಅಕ್ರಮವಾಗಿ ಮರದ ದಿಮ್ಮಿಗಳ ಸಂಗ್ರಹಿಸಿ ದಂಧೆ ನಡೆಸುತ್ತಿದ್ದ ಮರದ ಮಿಲ್ ಮೇಲೆ ದಾಳಿ ನಡೆಸಿರುವ ಮಡಿಕೇರಿ ಸಹಾಯಕ ಅರಣ್ಯಾಧಿಕಾರಿ ಮತ್ತು ಶನಿವಾರಸಂತೆ ಅಧಿಕಾರಿ ಹಾಗೂ ಸಿಬ್ಬಂದಿ ಅಕ್ರಮ ಮರದ ದಾಸ್ತಾನು ಸಹಿತ ಎರಡು ಲಾರಿ ಹಾಗೂ ಒಂದು ಕ್ರೇನ್ ಯಂತ್ರ ವಶಪಡಿಸಿಕೊಂಡಿದ್ದಾರೆ. ಶನಿವಾರಸಂತೆಯ ತಾಜ್ ಲಿಯೊತ್ ಶಾಮಿಲ್ ನಿಂದ ರೂ. 5 ಲಕ್ಷಮೌಲ್ಯದ ಮರ ಸಹಿತ ಎರಡು ಲಾರಿ, ಕ್ರೇನ್ ಯಂತ್ರ ಸಹಿತ ಒಟ್ಟು ರೂ. 35 ಲಕ್ಷದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.ಈ ಕಾರ್ಯ ಚರಣೆ ಏ.ಸಿ.ಎಫ್.ನೆಹರು ಹಾಗೂ ತಂಡದಿಂದ ನಡೆದಿದೆ .ಮರಮಿಲ್ ಮಾಲೀಕ ಹಾಗೂ ಇತರ ಆರೋಪಿಗಳು ತಲೆ ಮರೆಸಿಕೊಂಡಿದ್ದು ಓರ್ವ ವ್ಯಕ್ತಿಯ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗೊತ್ತಾಗಿದೆ.