ಶ್ರೀಮಂಗಲ, ಜು. 9: ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ನೂತನ ಕಟ್ಟಡ ನಿರ್ಮಿಸಿದ್ದರೂ ಇಲ್ಲಿಗೆ ಖಾಯಂ ವೈದ್ಯರಿಲ್ಲದೆ ಜನರಿಗೆ ಮೂಲಭೂತ ಸೌಲಭ್ಯ ದೊರೆಯುವಲ್ಲಿ ವೈಫÀÀಲ್ಯ ಕಾಣುವಂತಾಗಿದೆ. ಈ ವ್ಯಾಪ್ತಿಯಲ್ಲಿ ವಿದ್ಯುತ್ ನಿರಂತರ ಕಡಿತ ಹಾಗೂ ದೂರವಾಣಿ ದುರವಸ್ಥೆ ಬಗ್ಗೆ ಹೋರಾಟ ನಡೆಸಲು ಪ್ರತ್ಯೇಕ ಮೂರು ಸಮಿತಿ ರಚಿಸಿದ್ದು, ತಾ. 11ಕ್ಕೆ ಕಾನೂರಿನಲ್ಲಿ ಜಿಲ್ಲಾಡಳಿತ ಸಾರ್ವಜನಿಕ ಕುಂದು ಕೊರತೆ ಸಭೆ ಆಯೋಜಿಸಿದ್ದು, ಈ ಸಭೆಯಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸ ಬೇಕೆಂದು ಒತ್ತಾಯಿಸಲಾಯಿತು.
ಕಾನೂರು ಗ್ರಾ.ಪಂ. ಅಧ್ಯಕ್ಷೆ ಲತಾಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಿ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಯವರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳಿಗೆ ಹಾಗೂ ಸದಸ್ಯರುಗಳಿಗೆ ಕಳುಹಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರು ಇಲ್ಲದೆ ಇಲ್ಲಿನ ಜನರಿಗೆ ತೊಂದರೆಯಾಗುತ್ತಿದೆ. ಗ್ರಾ.ಪಂ. ವ್ಯಾಪ್ತಿಯ ಬೆಕ್ಕೆಸೊಡ್ಲೂರು, ಕೋತೂರು ನಾಲ್ಕೇರಿ, ಬಲ್ಯಮಂಡೂರು, ಕೊಟ್ಟಗೇರಿ ವ್ಯಾಪ್ತಿಯ ನಾಗರಿಕರು ಸಹ ಈ ಆರೋಗ್ಯ ಕೇಂದ್ರವನ್ನು ಅವಲಂಬಿ ಸಿದ್ದು, ಖಾಯಂ ವೈದ್ಯರಿಲ್ಲದೆ ಯಾವದೇ ಚಿಕಿತ್ಸೆ ದೊರೆಯುತ್ತಿಲ್ಲ. ತುರ್ತು ಸಂದರ್ಭ ವೈದ್ಯರು ಇಲ್ಲದೆ ಸಂಕಷ್ಟ ಉಂಟಾಗಿದೆ. ಆರೋಗ್ಯ ಕೇಂದ್ರದಲ್ಲಿ ಶುಶ್ರೂಕಿಯರು ಸಹ ಇರುವದಿಲ್ಲ. ಇಲ್ಲಿಗೆ ವೈದ್ಯರನ್ನು ನೇಮಕ ಮಾಡಿದ್ದರೂ ಒಂದು ದಿನ ಬಂದರೆ ಹತ್ತು ದಿನ ಬರುವದಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂರು ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದ್ದು, ಈ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತ ನಿರಂತರವಾಗಿದೆ. ಅಲ್ಲದೇ ವಿದ್ಯುತ್ ಇದ್ದರೆ ಸರಿಯಾದ ವೊಲ್ಟೇಜ್ ಇಲ್ಲದೇ ಸಮಸ್ಯೆ ಉಂಟಾಗಿದೆ. ಈ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್. ದೂರವಾಣಿ ಸೇವೆ ತುಂಬಾ ಹದಗೆಟ್ಟಿದೆ. ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರು ಬಿ.ಎಸ್.ಎನ್.ಎಲ್ ದೂರವಾಣಿ ಯನ್ನು ಅವಲಂಬಿಸಿದ್ದು, ಈ ಸಂಪರ್ಕ ವ್ಯತ್ಯಯದಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡರು.
ಬಿ.ಎಲ್.ಎನ್.ಎಲ್. ದೂರವಾಣಿ ದುಸ್ಥಿತಿಯ ಬಗ್ಗೆ ಸಹ ಸ್ಥಳೀಯ ದೂರವಾಣಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಾಕಾಗಿದ್ದು, ಅವರು ಕೂಡ ಸ್ಪಂದಿಸುತ್ತಿಲ್ಲ. ಇಲ್ಲಿನ ಜನರೇಟರಿಗೆ ಡೀಸೆಲ್ ಇರುವದಿಲ್ಲ, ಬ್ಯಾಟರಿ ಇರುವದಿಲ್ಲ. ಇಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಗ್ರಾಹಕರೇ ಚಂದಾ ಎತ್ತಿ ದುರಸ್ಥಿ ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕ, ವಿದ್ಯುತ್ ಮತ್ತು ದೂರವಾಣಿ ಸಮಸ್ಯೆ ನಿವಾರಣೆಗೆ ಸಭೆಯಲ್ಲಿ ಪ್ರತ್ಯೇಕ ಮೂರು ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಮಂದತ್ತವ್ವ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಮಾಚಿಮಾಡ ಎಂ. ರವೀಂದ್ರ, ಕಾನೂರು ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್, ತಾ.ಪಂ. ಸದಸ್ಯ ಪ್ರಕಾಶ್, ಗ್ರಾ.ಪಂ. ಮಾಜಿ ಸದಸ್ಯರಾದ ಭರತ್, ಸುನೀಲ್, ಪ್ರಮುಖರಾದ ಮಲ್ಲಮಾಡ ಪ್ರಭು ಪೂಣಚ್ಚ, ಈಶ್ವರ, ಸುನೀಲ್, ಗುಲ್ಸನ್, ವಾಹನ ಮಾಲೀಕರ ಸಂಘದ ಅಧ್ಯಕ್ಷ ಬಸಪ್ಪ, ಪೆÇನ್ನಿಮಾಡ ಸದಾಶಿವ, ಪೆÇೀರಂಗಡ ಬೋಪಣ್ಣ, ನಿಖಿಲ್, ಮೋಹನ್, ಗಪ್ಪಣ್ಣ, ತೀತಮಾಡ ಜಯ, ತಾಣಚ್ಚೀರ ದೀಪಕ್, ಸುಳ್ಳಿಮಾಡ ಸುಬ್ಬಯ್ಯ, ಉಮೇಶ್, ಸೋನು, ಶಂಕರು, ತಾನೇಶ್, ಮೋಹನ್, ಪ್ರಥ್ವಿ ಮತ್ತಿತರರು ಹಾಜರಿದ್ದರು.
ಜಿ.ಪಂ. ಸದಸ್ಯ ಬೆಂಬಲ
ಕಳೆದ ಒಂದು ವರ್ಷದಿಂದ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಗಳಿಲ್ಲದೆ ಸಾರ್ವಜನಿಕರು ಸೇವೆಯಿಂದ ವಂಚಿತವಾಗಿದ್ದು, ಮುಂದೆ ಅಲ್ಲಿನ ಗ್ರಾ.ಪಂ., ಸಂಘ ಸಂಸ್ಥೆಯಿಂದ ಹಮ್ಮಿಕೊಳ್ಳುವ ಮುಷ್ಕರಕ್ಕೆ ಬೆಂಬಲ ನೀಡುವದಾಗಿ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ತಿಳಿಸಿದ್ದಾರೆ.