ಮಡಿಕೇರಿ, ಜು. 9: ಮಡಿಕೇರಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮೇಲ್ಛಾವಣಿಯಲ್ಲಿ ಕುಸಿತ ಉಂಟಾಗಿದ್ದು, ಹೆಚ್ಚಿನ ಅನಾಹುತ ತಪ್ಪಿದೆ.
ಕೆಳಗೆ ಕುಳಿತಿದ್ದ ಇಬ್ಬರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕಾಂಕ್ರಿಟ್ ಕುಸಿದ ರಭಸಕ್ಕೆ ಕೆಳಗಿದ್ದ ಗ್ರಾನೈಟ್ ಕಲ್ಲಿನ ಆಸನ ಮುರಿದು ಹೋಗಿದೆ. ಮಧ್ಯಾಹ್ನದ ವೇಳೆ ಈ ಘಟನೆ ಸಂಭವಿಸಿದ್ದು, ಒಂದು ವೇಳೆ ಸಂಜೆ ಆಗಿದ್ದಿದ್ದರೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದ ನಿಲ್ದಾಣದಲ್ಲಿ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯಿತ್ತು.