ಮಡಿಕೇರಿ, ಜು. 9: ಮಡಿಕೇರಿ ನಗರದಲ್ಲಿ ಮೂವತ್ತೇಳು ಸಾವಿರ ಜನಸಂಖ್ಯೆ ಇದೆ. ಆದರೆ ಪ್ರತಿನಿತ್ಯ ನಗರ ವ್ಯಾಪ್ತಿಯಲ್ಲಿ ಸುಮಾರು 28 ಟನ್ ಕಸ ಸಂಗ್ರಹವಾಗುತ್ತಿದೆ ಎಂಬ ವಿಚಾರ ಇಂದು ನಗರಸಭೆ ವತಿಯಿಂದ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಘನತ್ಯಾಜ್ಯ ವಸ್ತು ವಿಲೇವಾರಿ ಕುರಿತ ಸಭೆಯಲ್ಲಿ ಬಯಲಾಯಿತು.
ನಗರಸಭಾ ಆಯುಕ್ತ ರಮೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ, ಕೊಡಗು ಫಾರ್ ಟುಮಾರೋ ಸಹಯೋಗದೊಂದಿಗೆ ನಡೆದ ಸಭೆಯಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕ ರಮೇಶ್ ಅವರು ಈ ಬಗ್ಗೆ ಮಾಹಿತಿಯಿತ್ತರು. ಪ್ರತಿನಿತ್ಯ ಸಂಗ್ರಹವಾಗುವ ಕಸದಲ್ಲಿ ಶೇ. 80 ರಷ್ಟು ಪ್ಲಾಸ್ಟಿಕ್ ಕಂಡು ಬರುತ್ತಿದೆ. ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿದರೂ ಸ್ಪಂದನ ಸಿಗುತಿಲ್ಲ ಎಂದರು.ಸಭೆಯಲ್ಲಿದ್ದ ನಾಗರಿಕರು ನಗರಸಭೆಯಿಂದ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂದರು.