ಕೂಡಿಗೆ, ಜು. 11: ಮುಳ್ಳುಸೋಗೆ ಗ್ರಾಮದ ವಾರ್ಡ್ ಸಭೆ ಗ್ರಾಮ ಪಂಚಾಯಿತಿ ಸದಸ್ಯೆ ಪಾರ್ವತಿ ಅಧ್ಯಕ್ಷತೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು. ಮುಳ್ಳುಸೋಗೆ ಮೊದಲನೆಯ ವಾರ್ಡ್‍ನ ಗ್ರಾಮಸ್ಥರು ವಾರ್ಡ್‍ನಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಶುಚಿತ್ವದ ಬಗ್ಗೆ ಸಭೆಯ ಗಮನ ಸೆಳೆದರು. ಮಹೇಶ್, ರವಿ, ಕೃಷ್ಣ ಈ ಸಭೆಯಲ್ಲಿ ಸಾರ್ವಜನಿಕರ ಬಗ್ಗೆ ಮಾತನಾಡಿದರು. ವಿವಿಧ ವಿಷಯ ಕುರಿತು ಚರ್ಚೆಗಳು ನಡೆದವು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ, ಉಪಾಧ್ಯಕ್ಷ ಸೇರಿದಂತೆ ಸದಸ್ಯರುಗಳು ಹಾಗೂ ಅಭಿವೃದ್ಧಿ ಅಧಿಕಾರಿ ಹಾಜರಿದ್ದರು.