ಮಡಿಕೇರಿ, ಜು. 11: ನೈಸರ್ಗಿಕ ವಿಕೋಪದಂಥ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಸೂಕ್ತ ರೀತಿಯಲ್ಲಿ ತಿಳುವಳಿಕೆ ನೀಡಬೇಕಾದ ಅಗತ್ಯ ಇಂದಿನ ದಿನಗಳಲ್ಲಿದೆ ಎಂದು ಯುನಿಸೆಫ್ ಸಂಸ್ಥೆ ಬೆಂಬಲಿತ ಸಮಗ್ರ ಕೊಡಗು ಸ್ಪಂದನ ಯೋಜನೆಯ ಜಿಲ್ಲಾ ಸಮಾಲೋಚಕ ಎಂ. ಪ್ರಭಾತ್ ಕಲ್ಕೂರ ಹೇಳಿದ್ದಾರೆ.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ಪ್ರಕೃತ್ತಿ ವಿಕೋಪ ಎದುರಿಸುವ ಸಂಬಂಧಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಾತ್ ಕಲ್ಕೂರ, ವಿದೇಶಗಳಲ್ಲಿ ಭೂಕಂಪ, ನೈಸರ್ಗಿಕ ದುರಂತಗಳು ಸಂಭವಿಸಿದಾಗ ಆ ಸಂದರ್ಭ ಹೇಗೆ ಸುರಕ್ಷತೆ ಪಡೆಯಬೇಕೆಂಬ ಬಗ್ಗೆ ತರಬೇತಿ ನೀಡಲಾಗಿರುತ್ತದೆ.

ಆದರೆ ಭಾರತದಲ್ಲಿ ಇಂತಹ ತರಬೇತಿ ಕಡಿಮೆಯಾಗಿರು ವದರಿಂದಲೇ ವಿಕೋಪಗಳು ಸಂಭವಿಸಿದಾಗ ಸಾವುನೋವಿನ ಸಂಖ್ಯೆ ಹೆಚ್ಚಿರುತ್ತದೆ. ಕೊಡಗಿನಲ್ಲಿಯೂ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಕೃತ್ತಿ ವಿಕೋಪ, ಅಗ್ನಿ ಆಕಸ್ಮಿಕ, ಪ್ರವಾಹ, ಸಿಡಿಲು ಹೊಡೆತ, ಬಿರುಗಾಳಿ, ಭೂಕಂಪದಂತಹ ಪರಿಸ್ಥಿತಿಯನ್ನು ಹೇಗೆ ಸಮರ್ಥವಾಗಿ ಎದುರಿಸಬಹುದು ಮತ್ತು ಅಂತಹÀ ಪರಿಸ್ಥಿತಿಯಲ್ಲಿ ಬೇರೆಯವರಿಗೂ ಹೇಗೆ ನೆರವಾಗಬಹುದು ಎಂಬ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ರೋಟರಿ ಮಿಸ್ಟಿ ಹಿಲ್ ್ಸಅಧ್ಯಕ್ಷ ಎಂ.ಆರ್. ಜಗದೀಶ್, ಕಾರ್ಯದರ್ಶಿ ಪ್ರಮೋದ್‍ಕುಮಾರ್ ರೈ ವೇದಿಕೆಯಲ್ಲಿದ್ದರು.