ಗೋಣಿಕೊಪ್ಪ ವರದಿ: ಪದವಿ ನಂತರ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸುವರ್ಣ ಕಾವೇರಿ ಉದ್ಯೋಗ ಭರವಸೆ ಯೋಜನೆಗೆ ಗೋಣಿಕೊಪ್ಪ ಕಾವೇರಿ ಕಾಲೇಜುವಿನಲ್ಲಿ ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್ ಎಂ.ಎ. ದೇವಯ್ಯ ಚಾಲನೆ ನೀಡಿದರು.ಟೀಚ್ ಟು ಫಿಶ್ ಟ್ರಸ್ಟ್, ಓರೈನ್ ಎಜುಟೆಕ್ ಸಂಸ್ಥೆ ಸಹಯೋಗದೊಂದಿಗೆ ನಡೆಯಲಿರುವ ವೃತ್ತಿಪರ ತರಬೇತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಅವರು, ಪದವಿಯೊಂದಿಗೆ ವಿದ್ಯಾರ್ಥಿಗಳು ವೃತ್ತಿ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಅವಶ್ಯಕತೆಯಿದೆ ಎಂದರು.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ ಮಾತನಾಡಿ, ಪದವಿಯೊಂದಿಗೆ ವೃತ್ತಿಕೌಶಲ್ಯ ವೃದ್ಧಿಸುವ ಯೋಜನೆಯನ್ನು ಜಾರಿಗೊಳಿಸಲು ಶಿಕ್ಷಣ ಸಂಸ್ಥೆ ಮುಂದಾಗಿರುವದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಲಿದೆ. ಬಹುತೇಕ ಶಿಕ್ಷಣ ಸಂಸ್ಥೆಗಳು ವೃತ್ತಿ ಕೌಶಲ್ಯ ಹೆಚ್ಚಿಸುವ ಯೋಜನೆಗಳನ್ನು ಜಾರಿಗೆ ತರಲು ಆಸಕ್ತಿ ತೋರುವದಿಲ್ಲ. ವಿದ್ಯಾರ್ಥಿಗಳು ಯೋಜನೆಯ ಪ್ರಯೋಜನೆಗಳನ್ನು ಪಡೆದುಕೊಳ್ಳುವದು ಉತ್ತಮ. ಪದವಿ ಮುಗಿದು ಉದ್ಯೋಗ ಹುಡುಕಾಟ ಸಂದರ್ಭ ವೃತ್ತಿ ಕೌಶಲ್ಯದ ಪ್ರಯೋಜನ ಬಗ್ಗೆ ಅರಿವಾಗುತ್ತದೆ ಎಂದರು.

ಟೀಚ್ ಟು ಫಿಶ್ ಟ್ರಸ್ಟ್ ಮುಖ್ಯಸ್ಥ ಶರತ್ ನಾರು ಮಾತನಾಡಿ, ಕೊಡಗಿನ ಯುವಜನತೆ ಕ್ರೀಡೆ ಹಾಗೂ ಸೈನ್ಯದಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿದ್ದಾರೆ. ವ್ಯವಹಾರಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಕೊಡಗಿನ ಯುವಜನತೆಯ ಪಾತ್ರ ಕಡಿಮೆಯಿದೆ ಎಂದು ಅಭಿಪ್ರಾಯಪಟ್ಟರು.

ಟೀಚ್ ಟು ಫಿಶ್ ಟ್ರಸ್ಟಿಗಳಾದ ಮೀನಾ ಬಿದ್ದಪ್ಪ, ಎಂ.ಡಿ. ಬೋಪಣ್ಣ, ಸಿ.ಬಿ. ಚಂಗಪ್ಪ, ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ, ನಿರ್ದೇಶಕಿ ಡಾ. ಪೊನ್ನಮ್ಮ ಮಾಚಯ್ಯ, ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಕುಸುಮಾಧರ, ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲೆ ಪ್ರೊ. ಇಟ್ಟೀರ ಕಮಲಾಕ್ಷಿ ಇದ್ದರು.

ಚೆಟ್ಟಳ್ಳಿ, ಜು. 8: ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಸಂಸ್ಥೆಯ ಅಧ್ಯಕ್ಷ ಮದ್ರೀರ ಪಿ. ವಿಷ್ಣು ಅÀವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಕಳ್ಳಿಚಂಡ ಕೆ. ವಿಷ್ಣು ಕಾರ್ಯಪ್ಪ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾಸಂಸ್ಥೆಯ ಬೆಳವಣಿಗೆಯಲ್ಲಿ ದಾನಿಗಳ ಪಾತ್ರ ಮಹತ್ವವಾದದ್ದು, ಮಾನವ ಜೀವನ ನಶ್ವರ, ಸತ್ಕರ್ಮಗಳೇ ಮಾನವನ ಶಾಶ್ವತ ಒಡನಾಡಿ, ಪ್ರತಿಯೊಬ್ಬರೂ, ಸತ್ಯ, ನ್ಯಾಯ, ನಿಷ್ಠೆ, ಪರಿಶ್ರಮ, ಕರ್ತವ್ಯ ಪ್ರಜ್ಞೆ, ಮಾತೃ ಪಿತೃ ಭಕ್ತಿ, ಗುರುಭಕ್ತಿ ಮೊದಲಾದ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು. ಸಂಸ್ಥೆಯ ಅಭಿವೃದ್ಧಿಗಾಗಿ ರೂ. 25 ಸಾವಿರಗಳನ್ನು ಉದಾರವಾಗಿ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಕೋಟ್ರಂಗಡ ಚಂಗಪ್ಪ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆಡಳಿತ ಮಂಡಳಿಯ ಉಪಾಧ್ಯಕ್ಷ ಮಚ್ಚಮಾಡ ಬಿ. ಸುಬ್ರಮಣಿ ಮತ್ತು ಆಡಳಿತ ಮಂಡಳಿಯ ಕಾರ್ಯದರ್ಶಿ ಕಟ್ಟೇರ ಪಿ . ಸುಶೀಲಾ ಅಚ್ಚಪ್ಪ ಜ್ಞಾನವೇ ಪರಮ ಶ್ರೇಷ್ಠ, ಏಕಾಗ್ರತೆ, ಆತ್ಮವಿಶ್ವಾಸ, ಸತತ ಪ್ರಯತ್ನವೇ ಯಶಸ್ಸಿಗೆ ಮೂಲ. ಇದನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ರಾಷ್ಟ್ರ ನಿರ್ಮಾಪಕರಾಗಬೇಕೆಂದು ಕರೆ ನೀಡಿದರು. ಖಜಾಂಚಿ ಕೆ.ಎನ್. ಸಂದೀಪ್, ನಿರ್ದೇಶಕರಾದ ಕುಂಞಂಗಡ ರಮೇಶ್, ಮಂದಮಾಡ ಗಣೇಶ್, ಅಜ್ಜಮಾಡ ಯು. ಬೋಪಣ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕ, ರತ್ನಮ್ಮ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರುಗಳಾದ ಚಟ್ಟಂಗಡ ಸುನಿತ ಹಾಗೂ ಚೆಕ್ಕೇರÀ ಪೊನ್ನಮ್ಮ ಹಾಜರಿದ್ದರು. ವಿದ್ಯಾರ್ಥಿನಿ ಸೀತೆ ಹಾಗೂ ರಮ್ಯ ಪ್ರಾರ್ಥಿಸಿದರು. ಅಧ್ಯಾಪಕ ನಾಗೇಶ್‍ಕುಮಾರ್ ಸ್ವಾಗತಿಸಿ, ಅರುಣಾಚಲ್ ವಂದಿಸಿದರು. ಉಪನ್ಯಾಸಕಿ ಅಜ್ಜಮಾಡ ರೇಖ ಕಾರ್ಯಕ್ರಮ ನಿರೂಪಿಸಿದರು.

ಆಲೂರು-ಸಿದ್ದಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆಲೂರು-ಸಿದ್ದಾಪುರ ಅಂಗನವಾಡಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರ ತಾಲೂಕು ಒಕ್ಕೂಟದ ಅಧ್ಯಕ್ಷೆ ಚಂದ್ರಲೇಖ, ಪೋಷಕರು ಮಕ್ಕಳನ್ನು ಆರೋಗ್ಯಕರವಾಗಿ ಪೋಷಿಸಬೇಕು, ಮಕ್ಕಳಿಗೆ ಪೌಷ್ಟಿಕಾಂಶ ಇರುವಂತಹ ಆಹಾರವನ್ನು ಕೊಡಬೇಕು. ಇದರಿಂದ ಮಗು ಆರೋಗ್ಯವಾಗಿ ಬೆಳೆಯುತ್ತದೆ ಎಂದರು. ಸರಕಾರ ಮಕ್ಕಳ ಅಭಿವೃದ್ಧಿ ಹಿತದೃಷ್ಟಿಯಿಂದ ಹಲವಾರು ಕಾರ್ಯಕ್ರಮ ಜಾರಿಗೊಳಿಸಿದೆ ಮಾತೃಪೂರ್ಣ, ಭಾಗ್ಯಲಕ್ಷ್ಮಿ, ಮಾತೃವಂದನೆ ಮುಂತಾದ ಯೋಜನೆಗಳ ಉಪಯೋಗವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪೋಷಕರು ತಮ್ಮ ಮಗುವನ್ನು ಆರೋಗ್ಯಕರವಾಗಿ ಬೆಳೆಸುವ ಉದ್ದೇಶದಿಂದ ಆರೋಗ್ಯ ಇಲಾಖೆ ಮತ್ತು ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ವ್ಯಾಪ್ತಿ ಮಟ್ಟದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮಕ್ಕಳ ಆರೋಗ್ಯ ಮತ್ತು ಮಗುವಿನ ನಡುವಿನ ಅಂತರದ ಕುರಿತು ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಇಂದಿರ ಮಾಹಿತಿ ನೀಡಿದರು. ಆಲೂರು-ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ವೀಣಾ ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಗ್ರಾ.ಪಂ. ಪಿಡಿಓ ಪೂರ್ಣಿಮ, ಆರೋಗ್ಯ ಸಹಾಯಕಿಯರಾದ ಸ್ವಾತಿ, ಶೋಭ, ಬಾಲ್ಯ ವಿಕಾಸ ಸಮಿತಿ ಅಧ್ಯಕ್ಷೆ ಪ್ರಿಯಾ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸುರೇಂದ್ರ ಪ್ರಮುಖರಾದ ಭರತ್‍ಕುಮಾರ್, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮತ್ತು ಮಕ್ಕಳ ತಾಯಂದಿರು ಪಾಲ್ಗೊಂಡಿದ್ದರು.

ಸೋಮವಾರಪೇಟೆ: ಜನಸ್ಪಂದನ ವಾಟ್ಸಾಪ್ ಗ್ರೂಪ್ ಮತ್ತು ಸ್ಪರ್ಶ್ ಫೌಂಡೇಷನ್‍ನ ಸಂಯುಕ್ತ ಆಶ್ರಯದಲ್ಲಿ ಸಮೀಪದ ಮಾದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಹೊಸ ರೂಪ ನೀಡಲಾಗಿದ್ದು, ಮೂಲಭೂತ ಸೌಕರ್ಯಗಳೊಂದಿಗೆ ಶಾಲೆಯ ಆಕರ್ಷಣೆಯನ್ನು ಹೆಚ್ಚಿಸುವ ಕಾರ್ಯ ನಡೆಯಿತು.

ಬೆಂಗಳೂರಿನ ಸ್ಪರ್ಶ್ ಫೌಂಡೇಷನ್ ವತಿಯಿಂದ ಶಾಲೆಯ ವಿದ್ಯಾರ್ಥಿಗಳ ಶೌಚಾಲಯ ನವೀಕರಣ ಕಾರ್ಯ ನಡೆದರೆ, ಜನಸ್ಪಂದನ ತಂಡದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಎಕ್ಸ್‍ಪ್ರೆಸ್ ಹೆಸರಿನೊಂದಿಗೆ ಶಾಲೆಗೆ ರೈಲಿನ ಮಾದರಿ ಪೈಂಟ್ ಬಳಿಯುವ ಮೂಲಕ ಕಟ್ಟಡಕ್ಕೆ ಹೊಸ ರೂಪ ನೀಡಲಾಯಿತು.

ಇದರೊಂದಿಗೆ ನಲಿಕಲಿ ಮಕ್ಕಳಿಗೆ ಕುರ್ಚಿಗಳು, ಆಧುನಿಕ ನೀರಿನ ಟ್ಯಾಂಕ್‍ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಗ್ರಾ.ಪಂ. ಸದಸ್ಯರಾದ ಮಜೀದ್, ಉಮೇಶ್, ಸೋಮಪ್ಪ, ಸಿಆರ್‍ಪಿ ವಸಂತ್‍ಕುಮಾರ್, ಐಆರ್‍ಟಿ ವೆಂಕಟೇಶ್, ಕುಂಬೂರು ಶಾಲಾ ಮುಖ್ಯ ಶಿಕ್ಷಕ ರಾಜಣ್ಣ ಸೇರಿದಂತೆ ಎಸ್‍ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.

ಜನಸ್ಪಂದನ ತಂಡದ ಕುಮಾರ್ ಅವರು ಬರೆದ ‘ಆತ್ಮ’ ಪುಸ್ತಕವನ್ನು ಇದೇ ಸಂದರ್ಭ ಮಾಜಿ ಸೈನಿಕ ಪಾಸುರ ಮಧು ಅವರು ಬಿಡುಗಡೆ ಮಾಡಿದರು. ಪರಿಸರ ಪ್ರೇಮಿ ಅಣ್ಣು, ಪೈಂಟರ್ ಖಾಸಿಂ, ಸ್ಪರ್ಶ್ ಫೌಂಡೇಷನ್‍ನ ಸುರೇಶ್, ಹರೀಶ್, ಸೂರಜ್, ಮಾಜೀ ಸೈನಿಕ ಮಧು ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜನಸ್ಪಂದನ ತಂಡದ ಪ್ರಸಾದ್, ರಾಘವೇಂದ್ರ, ವಿಜಯಲಕ್ಷ್ಮೀ, ಬಸವರಾಜ್ ಪಾಟೀಲ್ ಭಾಗವಹಿಸಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.ಕುಶಾಲನಗರ: ಕುಶಾಲನಗರ ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ಮತ್ತು ಪ್ರಥಮ ಬಿಕಾಂ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹುಣಸೂರು ತಾಲೂಕು ತಹಶೀಲ್ದಾರ್ ಬಸವರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸತತ ಪರಿಶ್ರಮ ಮತ್ತು ಇಚ್ಚಾಶಕ್ತಿ ಇದ್ದಲ್ಲಿ ಸಮಾಜದಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ. ಎಚ್.ಬಿ. ಲಿಂಗಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶಿಕ್ಷಣ ನೀಡುವ ಸಂಸ್ಥೆಗಳು ಜ್ಞಾನ ದೇಗುಲಗಳಿದ್ದಂತೆ. ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳನ್ನು ಗೌರವದಿಂದ ಕಾಣಬೇಕಿದೆ ಎಂದರು.

ಕನ್ನಡ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೂಡಿಗೆ ಸರಕಾರಿ ಕಾಲೇಜು ಪ್ರಾಂಶುಪಾಲ ಮಹಾಲಿಂಗಯ್ಯ ಪಿಯು ಕಾಲೇಜು ಪ್ರಾಂಶುಪಾಲ ಪುರುಷೋತ್ತಮ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರುದ್ರೇಶ್, ಉಪನ್ಯಾಸಕ ಪುಟ್ಟರಾಜು, ಸಂಸ್ಥೆಯ ನಿರ್ದೇಶಕ ಜಯವರ್ಧನ್ ಇದ್ದರು.

ಚೆಟ್ಟಳ್ಳಿ: ಸಮಾಜವು ಒಳ್ಳೆಯ ಹಾದಿಯತ್ತ ಸಾಗಲು ಧಾರ್ಮಿಕ ಶಿಕ್ಷಣದಿಂದ ಮಾತ್ರ ಸಾಧ್ಯ. ಅದಕ್ಕಾಗಿ ಧಾರ್ಮಿಕ ಗುರುಗಳು ವಹಿಸುತ್ತಿರುವ ಪಾಲು ಅವಿಸ್ಮರಣೀಯ ಎಂದು ಸ್ಥಳೀಯ ಖತೀಬ್ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ಹೇಳಿದರು.

ಸೋಮವಾರಪೇಟೆಯ ಕರ್ಕಳ್ಳಿ ಹಿದಾಯತು ಸಿಬ್‍ಯಾನ್ ಮದ್ರಸದಲ್ಲಿ ನಡೆದ ಜಂಇಯ್ಯತುಲ್ ಮುಅಲ್ಲಿಮೀನ್ ರೇಂಜ್ ಮಟ್ಟದ ವಾರ್ಷಿಕ ಮಹಾಸಭೆಯ ಉದ್ಘಾಟನೆ ಭಾಷಣದಲ್ಲಿ ಅವರು ಮಾತನಾಡಿದರು.

ರೇಂಜ್ ಅಧ್ಯಕ್ಷ ಅಬೂಬಕರ್ ಮದನಿ ಹೊಸತೋಟ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೆಲ್ಫೆಯರ್, ಟ್ರೈನಿಂಗ್, ಪರೀಕ್ಷೆ, ಮಿಷನರಿ, ಮ್ಯಾಗಜೀನ್ ವಿಭಾಗಗಳ ಕಳೆದ ಒಂದು ವರ್ಷದ ವರದಿಗಳನ್ನು ಮಂಡಿಸಿ ಮುಂದಿನ ಒಂದು ವರ್ಷದ ಕಾರ್ಯಚಟುವಟಿಕೆಗಳ ಕುರಿತು ಚರ್ಚೆ ನಡೆಸಲಾಯಿತು.

ಜಿಲ್ಲೆಯಿಂದ ಆಗಮಿಸಿದ ವೀಕ್ಷಕ ಜಲೀಲ್ ಇಂದಾದಿ ಕಾರ್ಯಕ್ರಮ ಮುನ್ನಡೆಸಿದರು. ಅಖಿಲ ಭಾರತ ಸುನ್ನಿ ವಿದ್ಯಾಭ್ಯಾಸ ಸಂಸ್ಥೆಯ ವಾರ್ಷಿಕ ಪಬ್ಲಿಕ್ ಪರೀಕ್ಷೆಯ 5ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನಾಫಿದ ಕರ್ಕಳ್ಳಿ ಹಾಗೂ ಅಲಿ ಸಖಾಫಿ ಕಲ್ಕಂದೂರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಹಸೈನಾರ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು.

ಸೋಮವಾರಪೇಟೆ: ತಾಲೂಕಿನ ನೆಲ್ಲಿಹುದಿಕೇರಿ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿದರು.

ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಕಂಡುಬರುತ್ತಿದ್ದು, ಇದೀಗ ಪ್ರಾಥಮಿಕ ಹಂತದಲ್ಲಿಯೇ ಇಂಗ್ಲಿಷ್ ಮಾಧ್ಯಮಕ್ಕೆ ಒತ್ತು ನೀಡಿರುವದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಚೇತರಿಕೆ ಕಾಣಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಮನೋಭಾವನೆ ಸಲ್ಲದು. ಹಲವಷ್ಟು ಸಾಧಕರು ಇಂತಹ ಶಾಲೆಗಳಲ್ಲಿಯೇ ಕಲಿತು ದೇಶಕ್ಕೆ ತಮ್ಮ ಸೇವೆ ಸಲ್ಲಿಸಿದ್ದಾರೆ. ಇಂತಹ ಮಹಾನ್ ಸಾಧಕ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ರವೀಂದ್ರ ಸಲಹೆಯಿತ್ತರು.

ಮಕ್ಕಳಲ್ಲಿ ಪೋಷಕರು ಮತ್ತು ಶಿಕ್ಷಕರು ದೈವತ್ವದ ಗುಣಗಳನ್ನು ಬೆಳೆಸಬೇಕು. ಅವರುಗಳ ಆಸಕ್ತಿಯ ವಿಷಯದಲ್ಲಿ ಪ್ರೋತ್ಸಾಹ ನೀಡಬೇಕು. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಮೈಮುನ ವಹಿಸಿದ್ದರು. ವೇದಿಕೆಯಲ್ಲಿ ಸದಸ್ಯರಾದ ಮಿನಿ, ರವಿ, ಶಾಲಾ ಮುಖ್ಯೋಪಾಧ್ಯಾಯಿನಿ ತಾರಾಮಣಿ, ಪ್ರಮುಖರಾದ ಚಂದ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶನಿವಾರಸಂತೆ: ಪಟ್ಟಣದ ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್ ಹಾಗೂ ದೃಢೀಕರಣ ಪತ್ರವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಾದ ಎಸ್.ಎಸ್. ಚಂದನ್, ಎನ್.ಯು. ನೇಹನ್, ಬಿ.ಎಲ್. ಸಂಪತ್, ಹೆಚ್.ಎಲ್. ಚಂದನ್, ಪಿ. ಸನನ್ಯ, ಎಸ್.ಕೆ. ನಾಯಕ್ ಸೈಪೂರ್ವಿ, ಐ.ಪಿ. ತನ್ಮಾ ಗೌಡ, ಎನ್.ಡಿ. ಧನರಾಜ್ ಅವರುಗಳಿಗೆ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎನ್.ಟಿ. ಗುರುಪ್ರಸಾದ್ ಬ್ಲ್ಯಾಕ್ ಬೆಲ್ಟ್ ಹಾಗೂ ದೃಢೀಕರಣ ಪತ್ರವನ್ನು ಪ್ರದಾನ ಮಾಡಿದರು. ಪ್ರಾಂಶುಪಾಲೆ ಡಿ. ಸುಜಲಾದೇವಿ ಹಾಗೂ ಶಿಕ್ಷಕರು ಇದ್ದರು.ಕೂಡಿಗೆ: ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಯಶಸ್ಸಿನತ್ತ ಸಾಗಲು ಕಠಿಣ ಪರಿಶ್ರಮದಿಂದ ತಮ್ಮ ಜೀವನ ಕಂಡುಕೊಳ್ಳಬೇಕು. ಕ್ರಿಯಾಶೀಲತೆ ಯನ್ನು ಮೈಗೂಡಿಸಿಕೊಂಡು ಪ್ರಶ್ನೆ ಮಾಡುವ ಹಾಗೂ ಚಿಂತನೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ತಿಳಿಸಿದರು.

ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ವಿದ್ಯಾರ್ಥಿ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳಿದ್ದು, ತಮ್ಮ ಕೆಲಸ ಕಾರ್ಯಗಳಿಗೆ ಮತ್ತೊಬ್ಬರನ್ನು ಅವಲಂಭಿಸದೆ ತಾವೇ ಮಾಡಿಕೊಳ್ಳಬೇಕಿರುವದರಿಂದ ಸ್ವಾವಲಂಭನಾ ಮನೋಭಾವವನ್ನು ಬೆಳೆಸಿಕೊಳ್ಳಬಹುದು. ವಸತಿ ಶಾಲೆಯಲ್ಲಿ ಸಹಕಾರ, ಸಹಾಯ, ಭ್ರಾತೃತ್ವ, ಮುಂತಾದ ಗುಣಗಳನ್ನು ರೂಢಿಸಿಕೊಳ್ಳಲು ಉತ್ತಮ ಅವಕಾಶಗಳಿವೆ. ಅವಕಾಶಗಳನ್ನು ಕೈಚೆಲ್ಲದಂತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಂಶುಪಾಲ ಪ್ರಕಾಶ್ ಮಾತನಾಡುತ್ತಾ, ಶಾಲೆಯ ಪ್ರಗತಿಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದ್ದು ವಸತಿ ಶಾಲೆಯ ನಿಯಮಗಳನ್ನು ಪಾಲಿಸಿ ಶಾಲೆಯ ಶಿಸ್ತನ್ನು ಕಾಪಾಡುವಂತೆ ಮನವಿ ಮಾಡಿದರು. ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿದರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸದೆ ವಿದ್ಯಾರ್ಥಿಗಳ ಪ್ರಗತಿ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳಬೇಕು. ಶಾಲೆಯ ಮತ್ತು ವಿದ್ಯಾರ್ಥಿಗಳ ಯಶಸ್ಸಿಗೆ ಪೋಷಕರ ಸಹಕಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ನಂತರ ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಸ್ವಾಗತ ಕೋರಲಾಯಿತು. ಈ ಸಂದರ್ಭ ಶಾಲೆಯ ಶಿಕ್ಷಕರ ವರ್ಗ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವಿದ್ಯಾರ್ಥಿಗಳು ಇದ್ದರು.

ಗೋಣಿಕೊಪ್ಪ: ಇಲ್ಲಿಗೆ ಸಮೀಪದಅತ್ತೂರುವಿನ ನ್ಯಾಷನಲ್‍ಅಕಾಡೆಮಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಇತ್ತೀಚೆಗೆ ನಡೆದು ವಿದ್ಯಾರ್ಥಿಗಳಿಗೆ ಪದಗ್ರಹಣದೊಂದಿಗೆ ಪ್ರಮಾಣ ವಚನ ಹಮ್ಮಿಕೊಳ್ಳಲಾಗಿತ್ತು.

ಶಾಲಾ ನಾಯಕನಾಗಿ ಯಶಸ್, ಶಾಲಾ ನಾಯಕಿಯಾಗಿ ಅರಿಲ್ ಟಿ.ಎಸ್, ಕ್ರೀಡಾ ನಾಯಕನಾಗಿ ಧÀನುಷ್‍ಗೌಡ ಸಿ.ಎಸ್., ಸಹ ಕ್ರೀಡಾ ನಾಯಕಿಯಾಗಿ ಮೌಲ್ಯ ಮಹೇಶ್, ಶಿಸ್ತಿನ ನಾಯಕಿಯಾಗಿ ಆಮ್ನಅಮೀರ್, ಸಾಂಸ್ಕøತಿಕ ನಾಯಕನಾಗಿ ಶಿಶಿರ್ ಆಯ್ಕೆಗೊಂಡರು. ಪೆಗಸಸ್ ಗುಂಪಿನ ನಾಯಕಿಯಾಗಿ ಸರೋಜ್, ಉಪನಾಯಕನಾಗಿ ಬೋಪಯ್ಯ, ಫೀನಿಕ್ಸ್ ಗುಂಪಿನ ನಾಯಕಿಯಾಗಿ ಲಲಿತಾ, ಉಪನಾಯಕನಾಗಿ ಸುಬ್ಬಯ್ಯ, ಆಕ್ವಿಲಾ ಗುಂಪಿನ ನಾಯಕನಾಗಿ ಆಕಾಶ್, ಉಪನಾಯಕಿಯಾಗಿ ಜುಹೈನಾ ಅಮೀರ್, ನೋಕ್ಟಾ ಗುಂಪಿನ ನಾಯಕನಾಗಿ ಚಿಣ್ಣಪ್ಪ, ಉಪನಾಯಕಿಯಾಗಿ ಅನುಷ್ಕ ಅಕ್ಕಮ್ಮ ಆಯ್ಕೆಯಾದರು. ಪ್ರಾಂಶುಪಾಲ ಅರುಣ್‍ಕುಮಾರ್ ಪ್ರಮಾಣ ವಚನ ಬೋಧಿಸಿದರು .ಈ ಸಂದರ್ಭ ವೇದಿಕೆಯಲ್ಲಿ ಶಾಲಾ ಸಂಸ್ಥಾಪಕಿ ಶಾಂತಿ ಅಚ್ಚಪ್ಪ, ಟ್ರಷ್ಟಿ ರಕ್ಷಿತ್ ಅಯ್ಯಪ್ಪ, ಮುಖ್ಯ ಅತಿಥಿಗಳಾದ ಹಾಸ್ಯ ಅಯ್ಯಪ್ಪ, ಸೇರಿದಂತೆ ಎಲ್ಲಾ ಶಿಕ್ಷಕ ವರ್ಗದವರು ಭಾಗಿಯಾಗಿದ್ದರು.

ಸೋಮವಾರಪೇಟೆ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ರಾಷ್ಟ್ರೀಯ ಹಸಿರು ಪಡೆ ಮತ್ತು ಇಕೋ ಕ್ಲಬ್ ಸಹಕಾರದೊಂದಿಗೆ ಮಾದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ. ಪ್ರೇಮಕುಮಾರ್, ದೈನಂದಿನ ಬದುಕನ್ನು ನಿಯಂತ್ರಿಸುವ ಪರಿಸರವನ್ನು ನಾಳಿನ ಜನಾಂಗಕ್ಕೆ ಉಳಿಸುವ ದಿಸೆಯಲ್ಲಿ ಪರಿಸರವನ್ನು ನಾವು ಕಾಪಾಡಿ ಸಂರಕ್ಷಿಸಬೇಕಿದೆ ಎಂದರು.

ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಸಾಕ್ಷಿ ಪ್ರಜ್ಞೆಯಾದ ಸಾಲು ಮರದ ತಿಮ್ಮಕ್ಕ ಅವರ ಮಾದರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ಶಾಲಾ ಮುಖ್ಯ ಶಿಕ್ಷಕಿ ಶೋಭಾ ಮಾತನಾಡಿದರು. ಸಹ ಶಿಕ್ಷಕರಾದ ಎಸ್.ಆರ್. ಸುನೀತಾ, ಎನ್.ಎಸ್. ಪೊನ್ನಮ್ಮ, ಬಿ.ಪಿ. ಜ್ಞಾನೇಶ್ವರಿ, ಕೆ.ಜೆ. ಮಮತ ಈ ಸಂದರ್ಭ ಉಪಸ್ಥಿತರಿದ್ದರು. ನಂತರ ನಡೆದ ಪರಿಸರ ಜಾಗೃತಿ ಆಂದೋಲನದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಘೋಷಣೆಗಳನ್ನು ಮೊಳಗಿಸುವ ಮೂಲಕ ಜನರ ಗಮನ ಸೆಳೆದರು.

ಸುಂಟಿಕೊಪ್ಪ: ಸುಂಟಿಕೊಪ್ಪ 2ನೇ ವಿಭಾಗದ ಉಲುಗುಲಿ ಅಂಗನವಾಡಿ ಉಪ ಕೇಂದ್ರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರಾಣೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಆರೋಗ್ಯವಂತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು ಶಿಶು ಮರಣ ತಾಯಂದಿರ ಮರಣ ಅಪೌಷ್ಟಿಕತೆ ರಕ್ತಹೀನತೆ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ವಿಶ್ವ ಜನಸಂಖ್ಯಾ ದಿನಾಚರಣೆ ಜುಲೈಯಲ್ಲಿ ನಡೆಯಲಿದ್ದು, ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ ತಾಯಿ ಮಗುವಿನ ಆರೋಗ್ಯದ ಬಗ್ಗೆ ನಿಗಾವಹಿಸಲು ಈ ಸಂದರ್ಭದಲ್ಲಿ ತಿಳಿಸಲಾಯಿತು.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮಕ್ಕಳ ಪೋಷಕರು ಭಾಗವಹಿಸಿದ್ದರು.ಚೆಟ್ಟಳ್ಳಿ: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾದ ಪಬ್ಲಿಕ್ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಿದಾಯತು ಸಿಬ್ಯಾಯಾನ್ ಮದರಸ ವಿದ್ಯಾರ್ಥಿಗಳಾದ ನಾಫಿದ 5ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಹಾಗೂ ನಾಫಿಯ ಎಂಬ ವಿದ್ಯಾರ್ಥಿ 7ನೇ ತರಗತಿಯಲ್ಲಿ ಸೋಮವಾರಪೇಟೆ ವಲಯದ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಮದರಸ ಅಧ್ಯಾಪಕ ಹಾಗೂ ಜಿಲ್ಲಾ ಎಸ್.ಎಸ್.ಎಫ್. ಅಧ್ಯಕ್ಷ ಅಜೀಜ್ ಸಖಾಫಿ ತಿಳಿಸಿದ್ದಾರೆ.

ಮಡಿಕೇರಿ: ಮೂರ್ನಾಡಿನ ಪದವಿ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಸರ್ಟಿಫಿಕೇಟ್ ಕೋರ್ಸನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಿವೃತ್ತ ಮೇಜರ್ ಬಿದ್ದಂಡ ನಂದ ನಂಜಪ್ಪ ಉದ್ಘಾಟಿಸಿದರು. ಪ್ರಥಮ ಬಿಕಾಂ ವಿದ್ಯಾರ್ಥಿಗಳಿಗೆ ಯೋಗ ತರಬೇತಿ, ದ್ವಿತೀಯ ಬಿಕಾಂ ವಿದ್ಯ�?