ಶನಿವಾರಸಂತೆ, ಜು. 11: ಶರಣರ ಆಚಾರ-ವಿಚಾರಗಳನ್ನು ನಾಡಿನೆಲ್ಲೆಡೆ ಪರಿಚಯಿಸುವ ಮಹೋನ್ನತ ಕಾಯಕ ಶರಣ ಸಾಹಿತ್ಯ ಪರಿಷತ್ನಿಂದಾಗುತ್ತಿದೆ ಎಂದು ಮುದ್ದಿನಕಟ್ಟೆ ಮಠಾಧೀಶ ಅಭಿನವ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೊಡ್ಲಿಪೇಟೆ ಹೋಬಳಿ ನಿಲುವಾಗಿಲು-ಬೆಸೂರು ಗ್ರಾಮದ ಬಾಲ ತ್ರಿಪುರಸುಂದರಿ ದೇವಾಲಯದ ಸಭಾಂಗಣದಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ ಸದಸ್ಯತ್ವ ಅಭಿಯಾನಕ್ಕೆ ಸದಸ್ಯರಾಗುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ ಹಾಗೂ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್ ಮಾತನಾಡಿದರು.
ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಶಿವಪ್ಪ, ಮುಖಂಡರಾದ ಡಿ.ಬಿ. ಸೋಮಪ್ಪ, ಮಹದೇವಪ್ಪ, ಉದಯ್, ಸಿ.ಎಂ. ಪುಟ್ಟಸ್ವಾಮಿ, ರಾಜಶೇಖರ್, ಪ್ರಸನ್ನ, ರೇಣುಕ, ಶಿವಕುಮಾರ್, ವಸಂತಕುಮಾರ್ ಇತರರು ಉಪಸ್ಥಿತರಿದ್ದರು.