ಬೆಂಗಳೂರು, ಜು. 11: ರಾಜ್ಯ ಉಸ್ತುವಾರಿ ಮುಖಂಡ ಮುರುಳೀಧರ್ ರಾವ್, ಬಿಜೆಪಿ ನಾಯಕ ಈಶ್ವರಪ್ಪ ಅವರು ಇಂದು ಸಂಜೆ ಕುಮಾರಕೃಪ ವಸತಿಗೃಹದಲ್ಲಿ ಪ್ರವಾಸೋದ್ಯಮ ಸಚಿವ, ಮುಖ್ಯಮಂತ್ರಿಗಳ ಆಪ್ತರಾದ ಸಾ.ರಾ. ಮಹೇಶ್ ಅವರು ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಮೂವರು ನಾಯಕರೂ ಸುಮಾರು ಅರ್ಧ ಗಂಟೆಯ ಕಾಲ ಮಾತುಕತೆ ನಡೆಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಇದೊಂದು ಆಕಸ್ಮಿಕ ಭೇಟಿ ಎಂದು ಸ್ಪಷ್ಟಪಡಿಸಿದ್ದಾರೆ.