ಮಡಿಕೇರಿ ನಗರದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿದೆ. ಇದರ ಬಗ್ಗೆ ನಗರಸಭಾ ಗಮನಕ್ಕೆ ತಂದರೂ ಯಾವದೇ ಕ್ರಮ ತೆಗೆದುಕೊಂಡಿಲ್ಲ. ಈ ದನಗಳು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದು ವಾಹನ ಸಂಚಾರಕ್ಕೆ ಮತ್ತು ಶಾಲಾ ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ ಕಳೆದ ಬಾರಿ ಕೊಹಿನೂರ್ ರಸ್ತೆಯಲ್ಲಿ ಎರಡು ಎತ್ತುಗಳು ಕಾಳUಕ್ಕೆ ಇಳಿದು ಬೈಕ್ ಸವಾರ ಬಿದ್ದು ಗಾಯವಾಗಿರುವ ನಿದರ್ಶನವಿದೆ. ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರು ನಗರಸಭೆಗೆ ಇದರ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದಾರೆ ಈ ಬಿಡಾಡಿ ದನಗಳಿಗೆ ನಗರಸಭೆ ವತಿಯಿಂದ ಒಂದು ದೊಡ್ಡಿಯ ವ್ಯವಸ್ಥೆ ಮಾಡಿ ದನಗಳನ್ನು ದೊಡ್ಡಿಗೆ ಹಾಕುವ ಮುಖಾಂತರ ನಗರದಲ್ಲಿ ಅಲೆದಾಡುತ್ತಿರುವ ಬೀಡಾಡಿ ಹಸುಗಳಿಂದ ಜನರಿಗೆ ಮತ್ತು ವಾಹನ ಸವಾರರಿಗೆ ಆಗುವ ಕಿರಿಕಿರಿಯಿಂದ ಮುಕ್ತಗೊಳಿಸಬೇಕು ಇದರ ಬಗ್ಗೆ ನಗರಸಭೆಯವರು ಮತ್ತು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು.
ರವಿಗೌಡ, ಅಧ್ಯಕ್ಷ ನಾಗರಿಕ ಹಿತರಕ್ಷಣಾ ವೇದಿಕೆ
ಹಾವು ಮರಿಗೆ ಜೀವದಾನ
ಮೇಕೇರಿ ಬಳಿ ರಸ್ತೆ ಮಧ್ಯದಲ್ಲಿ ಹಾವಿನ ಮರಿಹೊಂದು ರಸ್ತೆ ದಾಟಲು ಹವಣಿಸುತಿತ್ತು. ಸ್ವಲ್ಪ ದೂರದಲ್ಲೇ ಕಾರೊಂದು ಬರುತಿತ್ತು. ಇದನ್ನು ಗಮನಿಸಿದ ಮೇಕೇರಿಯ ಎಸ್. ಸೈಮನ್ ಹಾವು ಮರಿಯನ್ನು ಹಿಡಿದು ರಸ್ತೆ ಬದಿಯ ಕಾಡಿಗೆ ಬಿಟ್ಟು ಅದರ ಜೀವ ಉಳಿಸಿದರು.