ಒಡೆಯನಪುರ, ಜು. 11: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಒಡೆಯನಪುರ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶುಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ನಿಡ್ತ ಗ್ರಾ.ಪಂ. ಸದಸ್ಯೆ ನಳಿನಿರಾಮು ಉದ್ಘಾಟಿಸಿ ಮಾತನಾಡಿದರು. ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಪಾರ್ವತಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಎಂ.ಆರ್. ರಾಣಿ ಮಾಹಿತಿ ನೀಡಿದರು. ಕಿರಿಯ ಆರೋಗ್ಯ ಸಹಾಯಕಿ ಹೆಚ್.ಜಿ. ಶ್ವೇತ, ಒಡೆಯನಪುರ ಅಂಗನವಾಡಿ ಕೇಂದ್ರದ ಶಿಕ್ಷಕಿ ಎಸ್.ಎಲ್. ಧನ್ಯ, ಆಶಾ ಕಾರ್ಯಕರ್ತೆಯರಾದ ಸುಧಾಮಣಿ, ವೀಣಾ, ಅಂಗನವಾಡಿ ಶಿಕ್ಷಕಿಯರಾದ ಮೀನಾಕ್ಷಿ, ಫಾತೀಮ, ಶಿಲ್ಪ ಸುರೇಶ್, ಕಲ್ಯಾಣಿ ಮುಂತಾದವರು ಇದ್ದರು. ಆರೋಗ್ಯವಂತ ಶಿಶುಗಳಿಗೆ ಬಹುಮಾನ ವಿತರಿಸಲಾಯಿತು.