ಕುಶಾಲನಗರ, ಜು. 10: ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಶಾಲನಗರ ಪಟ್ಟಣ ಪೊಲೀಸರು ಬಂಧಿಸಿ ಕ್ರಮಕೈಗೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಮತ್ತು ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಅವರ ನೇತೃತ್ವದಲ್ಲಿ ಠಾಣಾಧಿಕಾರಿ ಜಗದೀಶ್, ಅಪರಾಧ ವಿಭಾಗದ ಸದಾಶಿವ ಮತ್ತು ಸಿಬ್ಬಂದಿಗಳು ದಾಳಿ ಮಾಡಿ 300 ಗ್ರಾಂ ಪ್ರಮಾಣದ ಗಾಂಜಾದೊಂದಿಗೆ ಪಿರಿಯಾಪಟ್ಟಣ ಪಂಚವಳ್ಳಿ ನಿವಾಸಿಗಳಾದ ಜಬೀವುಲ್ಲಾ ಖಾನ್ ಮತ್ತು ಅನ್ವರ್ ಎಂಬವರುಗಳನ್ನು ಬಂಧಿಸಿದ್ದಾರೆ.
*ಗೋಣಿಕೊಪ್ಪಲು : ಗಾಂಜಾ ಸೇವನೆ ಮಾಡುತ್ತಿದ್ದ ಯುವಕರ ತಂಡದ ಮೇಲೆ ಪೆÇನ್ನಂಪೇಟೆ ಪೆÇಲೀಸರು ದಾಳಿ ನಡೆಸಿ ಏಳು ಆರೋಪಿಗಳನ್ನು ಜಿಲ್ಲಾ ನ್ಯಾಯಾಲ ಯಕ್ಕೆ ಹಾಜರುಪಡಿಸಿದ್ದಾರೆ.ಪೆÇನ್ನಂಪೇಟೆ ಪೆÇಲೀಸ್ ಠಾಣಾಧಿಕಾರಿ ಬಿ.ಜಿ. ಮಹೇಶ್ ನೇತೃತ್ವದಲ್ಲಿ ಪೆÇನ್ನಂಪೇಟೆ ಪಟ್ಟಣದ ಜೂನಿಯರ್ ಕಾಲೇಜ್ ಮತ್ತು ರಾಮಕೃಷ್ಣ ಶಾರದಾಶ್ರಮದ ಸಮೀಪದ ಬಸ್ಸ್ ತಂಗುದಾಣದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಪೆÇನ್ನಂಪೇಟೆ ಜೂನಿಯರ್ ಕಾಲೇಜು ಜಂಕ್ಷನ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ನಿಸರ್ಗ ನಗರದ ಸಿ.ಜೆ. ರತನ್, ಐ.ಎಸ್. ಮನು, ಹಳ್ಳಿಗಟ್ಟು ಗ್ರಾಮದ ಬಿ. ನಿಂಗರಾಜು, ಜನತಾ ಕಾಲೋನಿ ನಿವಾಸಿ ಪಿ.ಎ. ಮುಬಾಷಿರ್ ಮತ್ತು ಪೆÇನ್ನಂಪೇಟೆ ಆಶ್ರಮ ಶಾಲೆಯ ಬಸ್ಸ್ ತಂಗುದಾಣದ ಬಳಿ ಕಾಟ್ರಕೊಲ್ಲಿ ಪೈಸಾರಿ ನಿವಾಸಿ ವಿ.ಹೆಚ್. ಫೈಸಲ್, ನಿಸರ್ಗ ನಗರದ ಟಿ.ಜಿ. ಕಾರ್ಯಪ್ಪ, ಬಿ.ವಿ. ವರುಣ್ ಇವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ದಾಳಿಯ ಸಂದರ್ಭ ಸಿಬ್ಬಂದಿಗಳಾದ ಎಸ್. ಮಣಿಕಂಠ, ಎಂ.ಡಿ. ಮನು ಹಾಜರಿದ್ದರು.