ಮಡಿಕೇರಿ, ಜು. 11: ವೀರಾಜಪೇಟೆ ಸಮೀಪದ ಕಡಂಗ ತಾಜುಲ್ ಉಲಮಾ ಬದ್ರಿಯಾ ಸುನ್ನಿ ಮುಸ್ಲಿಂ ಜಮಾಅತ್‍ನ 2019-2020ನೇ ಸಾಲಿನ ವಾರ್ಷಿಕ ಮಹಾ ಸಭೆ ಕೊಡಗು ಜಿಲ್ಲಾ ನಾಹಿಬ್ ಖಾಜಿ ಮಹಮೂದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಹಫೀಳ್ ಸಅದಿ ಕೊಳಕೇರಿ ಉದ್ಘಾಟನೆ ಮಾಡಿದರು. ಜಮಾಅತ್ ಅಧ್ಯಕ್ಷ ಎಂ.ಎ. ಅಬೂಬಕರ್ ಉಪಸ್ಥಿತಿಯಲ್ಲಿ ವಾರ್ಷಿಕ ವರದಿಯನ್ನು ಸಹ ಕಾರ್ಯದರ್ಶಿ ಸಿ.ಎಂ. ಆಶಿಕ್ ಹಾಗೂ ಲೆಕ್ಕ ಪತ್ರವನ್ನು ರಾಶೀದ್ ಮಂಡಿಸಿದರು. 2019-2020ನೇ ಸಾಲಿನ ಹೊಸ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಿ.ಎಂ. ಸುಲೈಮಾನ್, ಉಪಾಧ್ಯಕ್ಷರಾಗಿ ಕೆ.ಹೆಚ್. ಹಸೈನಾರ್ ಹಾಗೂ ಅಬ್ದುಲ್ ರಹ್ಮಾನ್ ಸಅದಿ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಂ. ಆಶಿಕ್ ಜಂಟಿ ಕಾರ್ಯದರ್ಶಿಯಾಗಿ ಷಂಶುದ್ದೀನ್ ಕಲ್ಲುಮೊಟ್ಟೆ ಹಾಗೂ ಸಿ.ಎಂ. ನೌಶಾದ್, ಕೋಶಾಧಿಕಾರಿಯಾಗಿ ರಂಶೀದ್ ಪೊದ್ದಮಾನಿ, ನಿರ್ದೇಶಕರಾಗಿ ಅಶ್ರಫ್ ಉಸ್ತಾದ್ ಕತಾರ್ ಹಾಗೂ ಸಿ.ಎ. ಅಶ್ರಫ್ ದುಬೈ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಪಿ.ಎ. ಸಲಾಂ, ಎಂ.ಎಂ. ಷರೀಫ್, ಯು.ಎಂ. ಸಲಾಂ, ಪಿ.ಎಂ. ಅಬೂಬಕರ್, ಆಡಿಟರ್‍ಗಳಾಗಿ ನಿಸಾರ್ ಸಖಾಫಿ, ರಶೀದ್ ಐಬಿಎಂ ಎಂ.ಬಿ. ನೌಫಲ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ರಾಶೀದ್ ಸ್ವಾಗತಿಸಿದರು.