ನಾಪೋಕ್ಲು, ಜು. 11: ಸ್ವಸಹಾಯ ಸಂಘಗಳಿಗೆ ಜ್ಞಾನವಿಕಾಸ ಕೇಂದ್ರಗಳು ಇಲ್ಲ. ಬದಲಾಗಿ ಸೀಮಿತ ಸಂಘಗಳನ್ನು ಒಟ್ಟು ಸೇರಿಸಿ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಹೇಮಾವತಿ ಹೆಗ್ಗಡೆ ಅವರ ಕಲ್ಪನೆಯಿಂದ ಮೂಡಿಬಂದ ಜ್ಞಾನವಿಕಾಸ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ತಾಲೂಕಿನ ಯೋಜನಾಧಿಕಾರಿ ಸದಾಶಿವಗೌಡ ಹೇಳಿದರು.

ತಿತಿಮತಿ-ದೇವದೊಡ್ಡಿ ಪ್ರದೇಶದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿ ಏರ್ಪಡಿಸಲಾಗಿದ್ದ ‘ಆರ್ಥಿಕ ಸ್ವಾವಲಂಬನೆಗಾಗಿ ಸಾಮಾಜಿಕ ಸಹಭಾಗಿತ್ವದ ಅಗತ್ಯತೆ’ ಎಂಬ ವಿಷಯದ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ವಹಿಸಿದ್ದರು. ಪ್ರಗತಿಬಂಧು ಸ್ವಸಹಾಯ ಸಂಘಗಳ ಅಧ್ಯಕ್ಷೆ ಮಂಜುಳ, ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಂತಿ, ಸೇವಾಪ್ರತಿನಿಧಿ ಸರಸ್ವತಿ ಪಾಲ್ಗೊಂಡಿದ್ದರು.