ಮಡಿಕೇರಿ, ಜು. 11: ವಿಕಾಸ ಜನಸೇವಾ ಟ್ರಸ್ಟ್ ಅನಾಥಾಶ್ರಮದ ನೂತನ ಗೌರವಾಧ್ಯಕ್ಷರಾಗಿ ಭಂತೆ ಭೋದಿದತ್ತ ಹಾಗೂ ಕಾರ್ಯದರ್ಶಿಯಾಗಿ ಆರ್. ಕಾವ್ಯ ಆಯ್ಕೆಯಾಗಿದ್ದಾರೆ.
ಅನಾಥಾಶ್ರಮದ ಅಧ್ಯಕ್ಷ ಹೆಚ್.ಕೆ. ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಕೆ.ಎ. ಮಮತ, ಸಹಕಾರ್ಯದರ್ಶಿಯಾಗಿ ಬಿ.ಪೂರ್ಣಿಮ, ಖಜಾಂಚಿ ಡಾ. ಬಿ.ಕೆ. ನವೀನ್ ಹಾಗೂ ಟ್ರಸ್ಟಿಗಳಾಗಿ ಡಾ. ಹೆಚ್.ಎಸ್. ಶ್ರೀಕಾಂತ್ ನೇಮಕ ಗೊಂಡಿದ್ದಾರೆ. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಹೆಚ್.ಕೆ. ರಮೇಶ್ ಮಾತನಾಡಿ, ಅನಾಥರನ್ನು ರಕ್ಷಿಸುವದೇ ಟ್ರಸ್ಟ್‍ನ ಮುಖ್ಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸೇವೆ ಮುಂದುವರಿಯಲಿದೆ ಎಂದರು. ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯ ಜನರ ಸಹಕಾರದಿಂದ ಸಂಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಅನಾಥರು, ಅಸಹಾಯಕರು, ದುರ್ಬಲರು ಕಂಡು ಬಂದಲ್ಲಿ ಮೊ. 9483110528, 7892908173 ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.