ಮಡಿಕೇರಿ, ಜು. 11: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೋಮ ಮತ್ತು ಸರ್ಟಿಫಿಕೇಟ್ ಪ್ರೋಗ್ರಾಮ್ ಗಳಿಗೆ ಅರ್ಜಿಗಳನ್ನು ಆನ್‍ಲೈನ್ ಮೂಲಕ ಆಹ್ವಾನಿಸಲಾಗಿದೆ.

ಸರ್ಟಿಫಿಕೇಟ್ ಪ್ರೋಗ್ರಾಮ್ ಗಳಿಗೆ ಆನ್‍ಲೈನ್‍ನಲ್ಲಿ ಅರ್ಜಿ ಭರ್ತಿ ಮಾಡಲು ತಾ. 15 ಹಾಗೂ ಇತರ ಪ್ರೋಗ್ರಾಮ್‍ಗಳಿಗೆ ತಾ. 31 ಕೊನೆ ದಿನವಾಗಿದೆ.

ಎಸ್.ಸಿ.-ಎಸ್.ಟಿ. ಅಭ್ಯರ್ಥಿ ಗಳಿಗೆ ಪದವಿ, ಡಿಪ್ಲೋಮ ಮತ್ತು ಸರ್ಟಿಫಿಕೇಟ್ ಪ್ರೋಗ್ರಾಮ್ ಗಳಿಗೆ ಉಚಿತ ಪ್ರವೇಶವಿದ್ದು ಆಫ್‍ಲೈನ್‍ನಲ್ಲಿ ಅರ್ಜಿಗಳನ್ನು ಅಧ್ಯಯನ ಕೇಂದ್ರಕ್ಕೆ ಸೂಕ್ತ ದಾಖಲಾತಿಗಳೊಂದಿಗೆ ಸಲ್ಲಿಸಬಹುದಾಗಿದೆ.

ಇತರ ಆಸಕ್ತ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ವಿಶ್ವವಿದ್ಯಾನಿಲಯದ ವೆಬ್‍ಸೈಟ್ ತಿತಿತಿ.igಟಿou.ಚಿಛಿ.iಟಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ವೀರಾಜಪೇಟೆಯ ಕಾವೇರಿ ಕಾಲೇಜಿನ ಇಗ್ನೋ ಅಧ್ಯಯನ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಬಹುದು ಅಥವಾ ಸಂಯೋಜಕ ಸೋಮಣ್ಣ ಹಾಗೂ ಕಚೇರಿಯ ದೂ. 08274-257479, 9945534151ನ್ನು ಸಂಪರ್ಕಿಸಬಹುದು.