ಮಡಿಕೇರಿ, ಜು. 10: ಏಷ್ಯನ್ ಹಾಕಿ ಫೆಡರೇಷನ್ ವತಿಯಿಂದ ಥೈಲ್ಯಾಂಡ್‍ನಲ್ಲಿ ತಾ. 15ರಿಂದ 21ರವರೆಗೆ ನಡೆಯಲಿರುವ ಒಳಾಂಗಣ ಮಹಿಳಾ ಏಷ್ಯಾಕಪ್‍ನಲ್ಲಿ ಪಾಲ್ಗೊಳ್ಳಲಿರುವ ಭಾರತ ಮಹಿಳಾ ಹಾಕಿ ತಂಡದ ಟೆಕ್ನಿಕಲ್ ಆಫೀಸರ್ ಆಗಿ ಜಿಲ್ಲೆಯವರಾದ ಪುಳ್ಳಂಗಡ ರೋಹಿಣಿ ಬೋಪಣ್ಣ ಅವರು ನೇಮಕಗೊಂಡಿದ್ದಾರೆ. 2014ರಿಂದ ವಿವಿಧ ಪಂದ್ಯಾವಳಿಗಳಲ್ಲಿ ಇವರು ಭಾರತ ತಂಡದ ಟೆಕ್ನಿಕಲ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಹಿಣಿ (ಸೌಮ್ಯ- ತಾಮನೆ ನೆಲ್ಲಮಕ್ಕಡ) ಮಾಜಿ ಅಂತರ ರಾಷ್ಟ್ರೀಯ ಹಾಕಿ ಗೋಲ್‍ಕೀಪರ್ ಪುಳ್ಳಂಗಡ ಯು. ಬೋಪಣ್ಣ ಅವರ ಪತ್ನಿ. ಇದು ಇವರ 5ನೇ ಅಂತರ್ರಾಷ್ಟ್ರೀಯ ಪಂದ್ಯಾವಳಿಯಾಗಿದೆ.