ವೀರಾಜಪೇಟೆ, ಜು.11 : ವೀರಾಜಪೇಟೆಯಲ್ಲಿ ಮೊಬೈಲ್ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಡಿಸಿಲ್ವಾನಗರ ನಿವಾಸಿ ಟೈಲರ್ ಮಕ್ಬೂಲ್ ಅವರ ಪುತ್ರ ಅಮಾನುಲ್ಲ (27) ನÀ ಮೃತದೇಹ ಗುರುವಾರ ಮಧ್ಯಾಹ್ನದ ವೇಳೆ ಮೈಸೂರಿನ ವಸತಿ ಗೃಹವೊಂದರಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಯಾಗಿರಬಹುದೆಂದು ಶಂಕಿಸಲಾಗಿದೆ. ಕಾರಣ ತಿಳಿದುಬಂದಿಲ್ಲ. ಕೆಲವು ತಿಂಗಳುಗಳಿಂದ ಮೈಸೂರಿನಲ್ಲಿ ಮೊಬೈಲ್ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದ ಈತ ಅವಿವಾಹಿತನಾಗಿದ್ದಾನೆ.
ಮೃತ ಅಮಾನುಲ್ಲಾ ತಾಯಿ, ಈರ್ವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಂತರ ವೀರಾಜಪೇಟೆಯಲ್ಲಿ ತಾ. 12 ರಂದು (ಇಂದು) ಅಂತ್ಯಕ್ರಿಯೆ ನೆರವೇರಲಿದೆ.