ಕೂಡಿಗೆ, ಜು. 11: ಹಾಸನ ಹಾಲು ಒಕ್ಕೂಟದಿಂದ ಕೊಡಗು ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಹಾಸನ ಹಾಲು ಒಕ್ಕೂಟದಿಂದ ರೂ. 2 ಲಕ್ಷ ಹಾಗೂ ಮುಖ್ಯಮಂತ್ರಿಗಳ ಅನುದಾನದಲ್ಲಿ ರೂ. 3 ಲಕ್ಷ ಸೇರಿ ರೂ. 5 ಲಕ್ಷ ನೀಡಲಾಗುವದು. ಸಂಘದ ಜಾಗದ ದಾಖಲಾತಿಗಳು ಮತ್ತು ಆಡಳಿತ ಮಂಡಳಿಯ ನಿರ್ಣಯವನ್ನು ಹಾಸನ ಹಾಲು ಒಕ್ಕೂಟಕ್ಕೆ ರೂ. 5 ಲಕ್ಷಗಳನ್ನು ಸದ್ಬಳಿಸಿಕೊಳ್ಳಿ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್‍ಕುಮಾರ್ ಹೇಳಿದರು.

ಕೂಡಿಗೆಯಲ್ಲಿ ನಡೆದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಹಾಸನ ಹಾಲು ಒಕ್ಕೂಟದ ವತಿಯಿಂದ ಕಳೆದ ತಿಂಗಳಿನಿಂದ ಜಿಲ್ಲೆಯ ರೈತರು ಸಹಕಾರ ಸಂಘಕ್ಕೆ ಹಾಕುವ ಹಾಲಿನ ದರದಲ್ಲಿ ರೂ. 1 ಗಳನ್ನು ಒಕ್ಕೂಟವು ಭರಿಸಲು ತೀರ್ಮಾನಿಸಿದಂತೆ ರೂ. 1 ಗಳನ್ನು ಹೆಚ್ಚಿಸಲಾಗಿದೆ. ಹಾಸನದಲ್ಲಿ ಪಶು ಆಹಾರ ಘಟಕವಿದ್ದು, ಇದರಿಂದ ಉತ್ತಮವಾದ ಪಶು ಆಹಾರವನ್ನು ತಯಾರಿಸಲಾಗುತ್ತಿದ್ದು, ಈ ಆಹಾರವನ್ನು ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಇದನ್ನು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ರೈತರು ಸದ್ಬಳಸಿಕೊಳ್ಳಬೇಕೆಂದು ತಿಳಿಸಿದರು. ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಟಿ.ವಿ. ವೀಣಾ ಮಾತನಾಡಿ, ಒಕ್ಕೂಟದಿಂದ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಹಾಲಿನ ಹಣವನ್ನು ಅವರವರ ಖಾತೆಗಳಿಗೆ ವಿತರಣೆ ಮಾಡಲಾಗು ತ್ತಿದೆ. ಆ ಮೂಲಕ ಸಂಘದ ಏಳಿಗೆಗೆ ಸಹಕಾರಿಗಳಾಗಬೇಕೆಂದರು.

ಮಹಾಸಭೆಯ ಅಧ್ಯಕ್ಷತೆಯನ್ನು ಕೂಡಿಗೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಕಮಲಾಚಂದ್ರ ವಹಿಸಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಭಾರತಿ ಸೇರಿದಂತೆ ನಿರ್ದೇಶಕರು ಹಾಗೂ ಸರ್ವ ಸದಸ್ಯರು ಇದ್ದರು.